ಚಂದ್ರಯಾನ-3 : ಲ್ಯಾಂಡಿಂಗ್ ದಿನಾಂಕ, ಸಮಯ ಘೋಷಿಸಿದ ಇಸ್ರೋ

ಸೋಮವಾರ, 21 ಆಗಸ್ಟ್ 2023 (07:04 IST)
ನವದೆಹಲಿ : ಚಂದ್ರನ ಚುಂಬಿಸಲು ಹೊರಟಿರುವ ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿಯಾಗಲು ಇನ್ನೊಂದು ಘಟ್ಟ ಬಾಕಿ ಉಳಿದಿದೆ. ಇಂದು ನಡೆದ ಎರಡನೇ ಮತ್ತು ಕಡೆಯ ಡಿ-ಬೂಸ್ಟಿಂಗ್ ಯಶಸ್ವಿಯಾಗಿದ್ದು, ಇದರ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಉಳಿಯುವ ಸಮಯವನ್ನು ಘೋಷಣೆ ಮಾಡಿದೆ.

ಭಾರತದ ಬಹು ನಿರೀಕ್ಷಿತ ಅಂತರಿಕ್ಷ ಯೋಜನೆ ಚಂದ್ರಯಾನ-3 ಚಂದ್ರನ ಅಪ್ಪಲು ಹೊರಟಿದೆ. ಚಂದ್ರನಿಗೆ ಹತ್ತಿರವಾಗುವ ಒಂದೊಂದೇ ಹಂತಗಳನ್ನು ದಾಟಿರುವ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ (06:04) ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡ್ ಆಗಲಿದೆ ಎಂದು ಇಸ್ರೋ ಹೇಳಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, ಭಾನುವಾರ ಬೆಳಗ್ಗೆ ನಡೆದ ಎರಡನೇ ಮತ್ತು ಕಡೆಯ ಹಂತದ ಡಿ-ಬೂಸ್ಟಿಂಗ್ (ಲ್ಯಾಂಡರ್ ವೇಗ ತಗ್ಗಿಸುವ ಪ್ರಕ್ರಿಯೆ) ಕಾರ್ಯ ಕೂಡ ಯಶಸ್ವಿಯಾಗಿದ್ದು, 134 ಕಕ್ಷೆಯಲ್ಲಿ ಸುತ್ತುತ್ತಿದ್ದ ವಿಕ್ರಮ್ ಲ್ಯಾಂಡರ್ ಈಗ 25 ಕಿಮೀ ಕಕ್ಷೆಯಲ್ಲಿ ಸುತ್ತಲು ಆರಂಭಿಸಿದೆ.

ಎರಡು ದಿನಗಳಲ್ಲಿ ಇದು ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಆಗಸ್ಟ್ 23 ರಂದು ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ ಲ್ಯಾಂಡ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ