ಸಿದ್ದರಾಮಯ್ಯ ದಲಿತ ವಿರೋಧಿ. ಕಳೆದ ವಿಧಾನಸಭಾ ಚುನಾವಣೆ ಬಳಿಕ ತಮ್ಮ ವಿರುದ್ಧ ಹೈ ಕಮಾಂಡ್‌ಗೆ ದೂರು ನೀಡಿದ್ದಕ್ಕೆ ಕೋಪಗೊಂಡು ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿ ಅಸಹಾಯಕರಾಗಿ ಮಾಡಿದ್ದರು. ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿಸಿ ಮಲ್ಲಿಕಾರ್ಜುನ್ ಖರ್ಗೆ ಬಾಯ್ಮುಚ್ಚಿಸಿದರು. ಈಗ ನನ್ನನ್ನು ಅವಮಾನಿಸುವ ಮೂಲಕ ದಲಿತ ನಾಯಕತ್ವವನ್ನು ದಮನಿಸುವ ಕುತಂತ್ರದಲ್ಲಿ ತೊಡಗಿದ್ದಾರೆ ಎಂದು ನಂಜನಗೂಡಿನ ಮಾಜಿ ಶಾಸಕ ಪ್ರಸಾದ್ ಕಿಡಿಕಾರಿದ್ದಾರೆ.