ರಾಜ್ಯದಲ್ಲಿ ಶ್ರೀರಾಮ ನವಮಿ ಸಡಗರ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತಿದೆ. ಬಗೆ ಬಗೆಯ ಹೂಗಳಿಂದ ದಶರಥ ಪುತ್ರನಿಗೆ ಅಲಂಕಾರ ಮಾಡಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲಾಗುತ್ತಿದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ಸಾರ್ವಜನಿಕ ಆಚರಣೆ ಇರಲಿಲ್ಲ. ಈ ಬಾರಿ ಆಚರಣೆ ಕಳೆಗಟ್ಟಿದೆ. ಮುಂಜಾನೆಯಿಂದಲೇ ದೇಗುಲಗಳತ್ತ ಭಕ್ತರು ಬರುತ್ತಿದ್ದು, ಶ್ರೀರಾಮ, ಹನುಮ ಮಂದಿರಗಳ ಬಳಿ ಭಕ್ತರ ದಂಡು ಹೆಚ್ಚಾಗಿದೆ. ಶ್ರೀ ರಾಮನ ದೇವಸ್ಥಾನಗಳಲ್ಲಿ ಸಡಗರದ ವಾತಾವರಣ ಮನೆಮಾಡಿದೆ. ಅಲ್ಲದೇ ರಾಜ್ಯದ ಗಲ್ಲಿಗಲ್ಲಿಯಲ್ಲಿಯೂ ಪಾನಕ, ಕೋಸಂಬರಿ, ಮಜ್ಜಿಗೆ ತಯಾರಿಸಿ ಹಂಚಲಾಯ್ತು.