ಅಯೋಧ್ಯೆ ಶ್ರೀರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ 12 ರಾಜ್ಯದ ಸಿಎಂಗಳು

ಬುಧವಾರ, 15 ಡಿಸೆಂಬರ್ 2021 (13:53 IST)
ಕಾಶಿ ವಿಶ್ವನಾಥನ ದೇವಸ್ಥಾನದಿಂದ ಗಂಗಾ ನದಿಯವರೆಗೆ ನಿರ್ಮಿಸಲಾದ ಕಾರಿಡಾರ್‌ ರನ್ನು ಉದ್ಘಾಟಿಸಿದ ಬಳಿಕ ಇಂದು ಬಿಜೆಪಿ ಆಡಳಿತ ರಾಜ್ಯಗಳ 12 ಮುಖ್ಯಮಂತ್ರಿಗಳು ಅಯೋದ್ಯೆಗೆ ಭೇಟಿ ನೀಡುಲಿದ್ದಾರೆ.
ಕಾಶಿ ವಿಶ್ವನಾಥನ ಕಾರಿಡಾರ್‌ ಉದ್ಘಾಟನೆಯ ನಂತರ ಸಭೆ ನಡೆಸಿ, ಉತ್ತರ ಪ್ರದೇಶದಲ್ಲೇ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿಗಳು ಇಂದು ಶ್ರೀರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.
ಹಿಮಾಚಲಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಅಸ್ಸಾಂ, ಮಣಿಪುರ, ಗುಜರಾತ್, ಹರಿಯಾಣ, ಗೋವಾ, ಬಿಹಾರ, ನಾಗಾಲ್ಯಾಂಡ್‌ ಮತ್ತು ಅರುಣಾಚಲಪ್ರದೇಶ ಸೇರಿದಂತೆ 12 ಮುಖ್ಯಮಂತ್ರಿಗಳು ಮೂವರು ಉಪಮುಖ್ಯಮಂತ್ರಿಗಳು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ಜತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ