ಸಿಎಂ ವಿರುದ್ಧ ಸಿಡಿದೆದ್ದ ಶ್ರೀರಾಮುಲು

ಸೋಮವಾರ, 12 ಅಕ್ಟೋಬರ್ 2020 (16:16 IST)
ಸಿಎಂ ವಿರುದ್ಧ ಸಚಿವ ಬಿ.ಶ್ರೀರಾಮುಲು ತೀವ್ರ ಅಸಮಧಾನಗೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಡಾ.ಸುಧಾಕರ್ ಅವರಿಗೆ ವಹಿಸಿರುವುದಕ್ಕೆ ಶ್ರೀರಾಮುಲು ನೊಂದುಕೊಂಡಿದ್ದಾರೆ.

ಇನ್ಮುಂದೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಬಿ.ಶ್ರೀರಾಮುಲು ಮುಂದುವರಿಯಲಿದ್ದಾರೆ. 
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಂಚಿಕೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ.

ಆರೋಗ್ಯ ಖಾತೆ ಕೈ ಬಿಟ್ಟಿದ್ದಕ್ಕೆ ಗರಂ ಆಗಿರುವ ಸಚಿವ ಬಿ ಶ್ರೀರಾಮುಲು ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸಹಜವಾಗಿಯೇ ಶ್ರೀರಾಮುಲು ನಡೆ ರಾಜಕೀಯ ಕುತೂಹಲ ಕೆರಳಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ