ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವ ವಹಿಸಿದಾಗ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಅವರು ನಾಯಕರಾಗಿ ತಂಡ ಸೋಲುತ್ತಿರುವಾಗ ಅಭಿಮಾನಿಗಳಿಗೆ ಅವರ ಮೇಲಿನ ನಿರೀಕ್ಷೆ ಹುಸಿಯಾಗಿದೆ.
ನಾಯಕನಾಗಿದ್ದರೂ ರಾಹುಲ್ ತಮ್ಮ ರನ್ ಗಳಿಸುವುದು ಮರೆಯಲಿಲ್ಲ. ಆದರೆ ಒಂದು ತಂಡವಾಗಿ ಜತೆಗೇ ಕರೆದೊಯ್ಯುವಲ್ಲಿ ವಿಫಲರಾದರು. ಒಂದು ವೇಳೆ ಪಂಜಾಬ್ ತಂಡದ ನಾಯಕರಾಗಿ ಅವರು ಯಶಸ್ವಿಯಾಗಿದ್ದರೆ ಮುಂದೊಂದು ದಿನ ಟೀಂ ಇಂಡಿಯಾದಲ್ಲಿ ನಾಯಕತ್ವಕ್ಕೆ ಅವರೇ ಪ್ರಬಲ ಸ್ಪರ್ಧಿಯಾಗಿರುತ್ತಿದ್ದರು. ಆದರೆ ಈಗ ಐಪಿಎಲ್ ನಲ್ಲಿ ನಾಯಕರಾಗಿ ವಿಫಲರಾಗಿರುವುದರಿಂದ ಅವರು ನಾಯಕತ್ವ ವಿಚಾರದಲ್ಲಿ ಇನ್ನಷ್ಟು ಬೆಳೆಯಬೇಕಾಗಿದೆ ಎಂಬುದು ಸ್ಪಷ್ಟವಾಗಿದೆ.