ST Somashekhar: ಹೆಣ್ಮಕ್ಕಳನ್ನು ಮಂಚಕ್ಕೆ ಕರೆಯುವವರಿಗೆ ಮೊದಲು ನೋಟಿಸ್ ಕೊಡಲಿ: ಎಸ್ ಟಿ ಸೋಮಶೇಖರ್

Krishnaveni K

ಬುಧವಾರ, 26 ಮಾರ್ಚ್ 2025 (14:16 IST)
ಬೆಂಗಳೂರು: ಬಿಜೆಪಿಯ ರೆಬೆಲ್ ಶಾಸಕ ಎಸ್ ಟಿ ಸೋಮಶೇಖರ್ ತಮಗೆ ಹೈಕಮಾಂಡ್ ನೋಟಿಸ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವವರಿಗೆ ನೋಟಿಸ್ ನೀಡಲಿ ಎಂದಿದ್ದಾರೆ.

ಬಿಜೆಪಿಯಲ್ಲಿದ್ದರೂ ಎಸ್ ಟಿ ಸೋಮಶೇಖರ್ ಇತ್ತೀಚೆಗೆ ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಷದ ನಿರ್ಧಾರಗಳನ್ನೇ ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ಸಭೆ, ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಇದೀಗ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ಬಣದ ಕೆಲವರ ಜೊತೆಗೆ ಸೋಮಶೇಖರ್ ಗೂ ಕಾರಣ ಕೇಳಿ ನೋಟಿಸ್ ನೀಡಿದೆ. 72 ಗಂಟೆಗಳೊಳಗಾಗಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬಗ್ಗೆ ಇಂದು ಎಸ್ ಟಿ ಸೋಮಶೇಖರ್ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ ಆರೋಪಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಮೊದಲು ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವವರಿಗೆ ನೋಟಿಸ್ ಕೊಡಲಿ ಎಂದಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಎಚ್ಐವಿ ಚುಚ್ಚುಮದ್ದು ನೀಡಲು ಯತ್ನಿಸಿದವರಿಗೆ ನೋಟಿಸ್ ನೀಡಿಲ್ಲ. ಆದರೆ ಶಿಸ್ತಿನ ಸಿಪಾಯಿಯಂತಿರುವ ನನ್ನಂತಹವರಿಗೆ ನೋಟಿಸ್ ನೀಡುತ್ತಾರೆ ಎಂದು ಹೈಕಮಾಂಡ್ ಗೇ ಸೆಡ್ಡು ಹೊಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ