ಬಿಜೆಪಿಯವರಿಗೆ ಅಂಬೇಡ್ಕರ್ ಅಲ್ಲ, ಸ್ವಂತ ಇತಿಹಾಸವೇ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ

Krishnaveni K

ಮಂಗಳವಾರ, 18 ಮಾರ್ಚ್ 2025 (15:47 IST)
ಬೆಂಗಳೂರು: ಸದನದಲ್ಲಿ ಸವಾರ್ಕರ್ ಫೋಟೋ ತೆರವು ವಿಚಾರವಾಗಿ ಸದನದಲ್ಲಿ ಉಂಟಾದ ಆರೋಪ ಪ್ರತ್ಯಾರೋಪಗಳು ಮುಂದುವರಿದಿದ್ದು ಇಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಕುಟುಕಿದ್ದಾರೆ.
 

ನಿನ್ನೆ ಸದನದಲ್ಲಿ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಎಂದು ಬಿಜೆಪಿ ಸದಸ್ಯರು ಹೇಳಿದಾಗ ಕೆರಳಿದ ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ಅವರು ತಮ್ಮ ಸ್ನೇಹಿತರಿಗೆ ಬರೆದ ಪತ್ರದಲ್ಲಿ ಸಾವರ್ಕರ್ ನನ್ನನ್ನು ಸೋಲಿಸಿದ್ದು ಎಂದು ಬರೆದಿದ್ದರು ಎಂದು ತಿರುಗೇಟು ನೀಡಿದ್ದರು.

ಇಂದು ಮತ್ತೆ ಅದೇ ಮಾತನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ‘ಬಿಜೆಪಿಯವರಿಗೆ ಅಂಬೇಡ್ಕರ್ ಬಿಡಿ ಅವರ ಇತಿಹಾಸವೇ ಗೊತ್ತಿಲ್ಲ. ನಾವು ಯಾರೋ ಹೇಳಿದ್ದು ಕೇಳಿದ್ದು ಕೇಳಿ ಈ ಹೇಳಿಕೆ ನೀಡಿಲ್ಲ. ಅಂಬೇಡ್ಕರ್ ಅವರು ತಮ್ಮ ಸ್ನೇಹಿತರಿಗೆ ತಮ್ಮದೇ ಕೈ ಬರಹದಲ್ಲಿ ಬರೆದ ಪತ್ರದಲ್ಲೇ ಬಹಳ ಸ್ಪಷ್ಟವಾಗಿ ಸಾವರ್ಕರ್ ಸೋಲಿಸಿದ್ದು ಎಂದು ಬರೆದಿದ್ದಾರೆ. ಇದನ್ನು ನಾವು ಹೇಳಿದ್ದಲ್ಲ. ಈಗ ರಾಜಕೀಯಕ್ಕಾಗಿ ಬಿಜೆಪಿ ನಮ್ಮ ಮೇಲೆ ಗೂಬೆ ಕೂರಿಸ್ತಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ