ರಾಜ್ಯಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣು

ಮಂಗಳವಾರ, 20 ಸೆಪ್ಟಂಬರ್ 2022 (11:18 IST)
ದಾವಣಗೆರೆ : ಸಾಲುಮರದ ವೀರಾಚಾರಿ, ಪರಿಸರ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದ ಮಿಟ್ಲಕಟ್ಟೆ ವೀರಾಚಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಜ್ಯ ಪ್ರಶಸ್ತಿ ವಿಜೇತ, ಪಬ್ಲಿಕ್ ಹೀರೋ ಆಗಿದ್ದ ಸಾಲುಮರದ ವೀರಾಚಾರಿ ಮಧ್ಯರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

3,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ದಾವಣಗೆರೆ ಜಿಲ್ಲೆಗೆ ವೀರಾಚಾರಿ ಚಿರಪರಿಚಿತರಾಗಿದ್ದರು. ಸಾಲುಮರಗಳನ್ನು ಬೆಳೆಸಿದ್ದ ಪರಿಸರ ಪ್ರೇಮಿ ಮಿಟ್ಲಕಟ್ಟೆ ಅವರಿಗೆ ಈ ಹಿಂದೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಕೂಡ ನೀಡಿತ್ತು.

ಮಿಟ್ಲಗಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂದು ನ್ಯಾಯಬೆಲೆ ಅಕ್ರಮದ ವಿರುದ್ಧ ನಿರಂತರವಾಗಿ ಕಳೆದ ಒಂದು ವರ್ಷದಿಂದ ವೀರಾಚಾರಿ ಅವರು ಹೋರಾಟ ನಡೆಸುತ್ತಿದ್ದರು.

ಈ ಹಿಂದೆ ಮಿಟ್ಲಕಟ್ಟೆ ವೀರಾಚಾರಿ ಅವರು, ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ, ಜನರಲ್ಲಿ ನ್ಯಾಯ ಸಿಗದಿದ್ದರೆ, ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುವುದಾಗಿ ವಾಗ್ದಾನ ಮಾಡಿದ್ದರು. ಇದೀಗ ವಾಗ್ದಾನದಂತೆ ಸೋಮವಾರ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ