ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ಒಡಕಿಲ್ಲ: ಲಿಂಬಾವಳಿ ಸ್ಪಷ್ಟನೆ

ಗುರುವಾರ, 6 ಅಕ್ಟೋಬರ್ 2016 (17:44 IST)
ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ಒಡಕಿಲ್ಲ. ನಾವೆಲ್ಲ ಒಂದಾಗಿದ್ದೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.  
 
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಸನ್ನದ್ಧರಾಗಿ ಎಂದು ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್ ಸೂಚನೆ ನೀಡಿದ್ದಾರೆ ಎಂದು ಹೇಳಿದರು. 
 
ಬೂತ್ ಲೆವಲ್‌ನಿಂದ ರಾಜ್ಯ ನಾಯಕರಿಗೆ ಉತ್ಸಾಹ ತುಂಬುವ ಕೆಲಸ ರಾಮ್‌ಲಾಲ್ ಮಾಡಿದ್ದಾರೆ. ಜನಸಂಘದ ಕಾಲದಲ್ಲಿ ಈ ರೀತಿ ನಡೆಯುತ್ತಿತ್ತು ಎಂದು ಹೇಳಿದರು. 
 
ಅಕ್ಟೋಬರ್ 23 ರಂದು ಲಿಂಗಸೂರಿನಲ್ಲಿ ಎಸ್‌ಟಿ ಮೋರ್ಚಾ ಸಮಾವೇಶ. ನವೆಂಬರ್ 27 ರಂದು ಬೆಂಗಳೂರಿನಲ್ಲಿ ಓಬಿಸಿ ಮೋರ್ಚಾ ಸಮಾವೇಶ ಹಾಗೂ ಜನವರಿ ತಿಂಗಳಲ್ಲಿ ಕಲಬುರ್ಗಿಯಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ