ಈ ವೇಳೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾಪರಪ್ಪ ನಾನೆಷ್ಟು ಓದಿದ್ದೀನಿ ಎಂದು ಹೇಳಿ ಬೇರೆ ಪಕ್ಷದವರು ಹೇಳಿದ್ದಾರೆ.ಅವರಿಗೆ ದೇವರು ಒಳ್ಳೆದನ್ನ ಮಾಡಲಿ ಎಂದು ಮಧು ಬಂಗಾರಪ್ಪ ಟೀಕೆ ಮಾಡಿದ್ದು,ನಮ್ಮ ಸರ್ಕಾರ ಮಕ್ಕಳ ಭವಿಷ್ಯ ರೂಪಿಸಲು ನಿಂತಿದೆ.ಪಕ್ಷ ಅಧಿಕಾರಕ್ಕೆ ಬಂದು ಸಾರ್ವಜನಿಕರಿಗಾಗಿ ಕೆಲಸ ಮಾಡಬೇಕಿದೆ.ಅದನ್ನು ನಮ್ಮ ಸರ್ಕಾರ ಮಾಡಿದೆ.ನಮ್ಮ ಮ್ಯಾನಿಫೇಸ್ಟೋದಲ್ಲಿ ಕುವೆಂಪು ಅವರ ವಾಕ್ಯ ಸರ್ವಜನಾಂಗದ ಶಾಂತಿ ತೋಟ ಎಂದು ಬರೆಯಲಾಗಿದೆ.ಇಂದು ನಡೆಯುವ ಎಲ್ಲಾ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರೆ,ನಾವು ಕೂಡ ಅದರ ಬಗ್ಗೆ ಚರ್ಚೆ ನಡೆಸಲು ಸಹಾಯವಾಗುತ್ತದೆ ಎಂದು ಮಧುಬಂಗಾರಪ್ಪ ಹೇಳಿದ್ರು.
ಅಲ್ಲದೆ ಕೇವಲ ನನ್ನ ಇಲಾಖೆ ಅಡಿ 3೦ ಲಕ್ಷಕ್ಕೂ ಹೆಚ್ಚು ಶಿಕ್ಷಕರಿದ್ದಾರೆ, ಹಾಗೂ 1.5೦ ಕೋಟಿ ಹೆಚ್ಚು ಮಕ್ಕಳಿದ್ದಾರೆ.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲು ಮಾಡಿದ್ದು, ಪಠ್ಯ ಪರಿಷ್ಕರಣೆ ಆದರೆ ಪಠ್ಯ ಪರಿಷ್ಕರಣೆ ಆಗುವ ಮೊದಲೇ ಮಕ್ಕಳ ಕೈಗೆ ಪುಸ್ತಕಗಳು ತಲುಪಿದ್ದವು ಹಾಗಾಗಿ ಈ ಬಾರಿ ಕೇವಲ ಪಾಠಗಳನ್ನು ಬದಲಿಸುವ ಕಾರ್ಯ ನಡೆದಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆ ಮಾಡಲು ಪ್ರಯತ್ನ ಪಡುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.