ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಜಾಗೃತಿ, ಹಿಂದೂ ಸಂಘಟನೆಗಾಗಿ ಜನವರಿ 28 ಮತ್ತು 29 ರಂದು ಬೆಂಗಳೂರಿನ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್ಮನ್ ಸೆಂಟರ್ನಲ್ಲಿ ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸುತ್ತಿದೆ. ಇದರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಲವ್ ಜಿಹಾದ್, ಹಲಾಲ್ ಜಿಹಾದ್, ಲ್ಯಾಂಡ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ, ಇತಿಹಾಸದ ವಿಕೃತೀಕರಣ, ಹಿಂದೂ ಧರ್ಮ, ಪರಂಪರೆಗಳ ಮೇಲೆ ಆಘಾತ, ಹಿಂದೂ ದೇವಸ್ಥಾನಗಳ ಸರಕಾರೀಕರಣ, ಗೋರಕ್ಷಣೆ ಮುಂತಾದ ಹಿಂದೂ ಸಮಾಜದ ಮೇಲೆ ಆಘಾತ ಮಾಡುವ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿವೆ. ಸದ್ಯದ ದಿನಗಳಲ್ಲಿ ಹಿಂದೂ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳಿಗೆ ಉಪಾಯವೆಂದು ಮಾಡಬೇಕಾದ ಹಿಂದೂ ಜಾಗೃತಿ, ಹಿಂದೂ ಸಂಘಟನೆ, ಹಿಂದೂ ಆಂದೋಲನಗಳ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಲಾಗುವುದು' ಎಂದರು.