ರಾಜ್ಯದ್ಯಂತ ಅನಧಿಕೃತ ಟ್ಯೂಷನ್ ಹಾವಳಿ
ರಾಜಧಾನಿಯಲ್ಲಿ ಅನಧಿಕೃತ ಟ್ಯೂಷನ್ ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಪೋಷಕರ ಹತ್ತಿರ ಹಣ ಲೂಟಿ ಮಾಡಲು ಟ್ಯೂಷನ್ ಗಳು ಮುಂದಾಗ್ತಿದೆ. ಎಷ್ಟೋ ಜನರು ಲೈಸನ್ಸ್ ಇಲ್ಲದೇ ಟ್ಯೂಷನ್ ನಡೆಸ್ತಿದ್ದಾರೆ. ಅನಧಿಕೃತವಾಗಿ ಇರುವ ಟ್ಯೂಷನ್ ನಿಂದ ಕಾನೂನಾತ್ಮಕವಾಗಿರುವ ಟ್ಯೂಷನ್ ಗೂ ಎಫೆಕ್ಟ್ ಆಗುತ್ತೆ. ಹಣದ ದಂಧೆ ಮಾಡಲೆಂದು ಅನಧಿಕೃತವಾಗಿ ಪ್ರಾರಂಭವಾದ ಟ್ಯೂಷನ್ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಖಾಸಗಿ ಶಾಲಾ ಒಕ್ಕೂಟದ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಿಎಂ ಗೆ ಪತ್ರ ಬರೆದಿದ್ದಾರೆ.