ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ 450 ಕೋಟಿ ಅವ್ಯಹಾರ: ಆರ್.ಅಶೋಕ್ ಆರೋಪ

ಶುಕ್ರವಾರ, 21 ಅಕ್ಟೋಬರ್ 2016 (12:48 IST)
ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಇದೆ. ಯೋಜನೆಯಲ್ಲಿ 450 ಕೋಟಿ ಅವ್ಯಹಾರ ನಡೆದಿರುವ ಮಾತುಗಳು ಕೇಳಿ ಬರುತ್ತದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಗಂಭೀರವಾಗಿ ಆರೋಪಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 1800 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯ ಸರಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಮುಂದಾಗಿದೆ. ಇದು ಸ್ಟೀಲ್ ಬ್ರಿಡ್ಜ್ ಅಲ್ಲ, ಗೋಲ್ಡ್ ಬ್ರಿಡ್ಜ್ ಎಂದು ಲೇವಡಿ ಮಾಡಿದರು.
 
ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುವ ಕುರಿತು ಯಾವುದಾದರು ಸಂಘಟನೆ ಅಭಿಯಾನ ನಡೆಸಿದರೇ ಬಿಜೆಪಿ ಬೆಂಬಲಿಸುತ್ತದೆ. ನಾನು ಸಚಿವನಾಗಿದ್ದ ಸಮಯದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಆಸಕ್ತಿಯೇ ತೋರಿಸಿರಲಿಲ್ಲ. ರಾಜ್ಯ ಸರಕಾರ ತರಾತುರಿಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಹಿಂದೆ ಯಾರಿದ್ದಾರೆ? ನಿರ್ಮಾಣದ ಗುತ್ತಿಗೇದಾರರು ಯಾರು? ಈ ಕುರಿತು ರಾಜ್ಯ ಸರಕಾರ ಬಹಿರಂಗಪಡಿಸಲಿ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ