ಕೊರೊನಾ ಭೀತಿಯ ಮಧ್ಯೆ ರಾಜ್ಯಕ್ಕೆ ಚಂಡಮಾರುತದ ಆತಂಕ

ಬುಧವಾರ, 3 ಜೂನ್ 2020 (09:15 IST)
ಬೆಂಗಳೂರು : ಕೊರೊನಾ ಭೀತಿಯ ಮಧ್ಯೆ ಇದೀಗ ರಾಜ್ಯಕ್ಕೆ ರಣಭೀಕರ ಚಂಡಮಾರುತದ ಭೀತಿ ಎದುರಾಗಿದೆ.


ಕರಾವಳಿ ಭಾಗದಲ್ಲಿಯೂ ನಿಸರ್ಗ ಚಂಡಮಾರುತ ಅಪ್ಪಳಿಸಲಿದ್ದು,  ಅರಬ್ಬೀಸಮುದ್ರದಿಂದ ದಡಕ್ಕೆ ಭಾರೀ ಅಲೆಗಳು ಏಳುತ್ತಿವೆ. ಇದರಿಂದ  ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


65 ರಿಂದ 85ಕಿ.ಮೀ ವೇಗದಲ್ಲಿ ಚಂಡಮಾರುತ ಬರುತ್ತಿರುವ ಕಾರಣ ಮಲೆನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೊಷಣೆ ಮಾಡಲಾಗಿದೆ. 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು,  ರಾಜ್ಯದ 4 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ