ಬೆಂಗಳೂರು : ಧಾನ್ಯಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಧಾನ್ಯಗಳು ಬೇಗನೆ ಬೇಯುವುದಿಲ್ಲ. ಅದು ಬೇಗ ಬೇಯಲು ಈ ಟ್ರಿಕ್ಸ್ ಫಾಲೋ ಮಾಡಿ.
ಧಾನ್ಯಗಳಿಂದ ಯಾವುದೇ ಅಡುಗೆ ತಯಾರಿಸುವ ಮೊದಲು ಅದನ್ನು ನೀರಿನಲ್ಲಿ 8 ಗಂಟೆಗಳ ಕಾಲ ಮೊದಲೇ ನೆನೆಸಿಡಬೇಕು. ಒಂದು ವೇಳೆ ನೆನೆ ಹಾಕಲು ನೆನಪಿಲ್ಲವಾದರೆ ಆಗ ಧಾನ್ಯಗಳನ್ನು 1 ಗಂಟೆ ನೆನೆಸಿ ಬಳಿಕ ಕುಕ್ಕರ್ ನಲ್ಲಿ ಬೇಯಿಸುವಾಗ ಅಡುಗೆ ಸೋಡಾವನ್ನು ಹಾಕಿ ಬೇಯಿಸಿ. ಆಗ ಅದು ಬೇಗನೆ ಬೇಯುತ್ತದೆ.