60 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್!

ಮಂಗಳವಾರ, 18 ಜನವರಿ 2022 (20:33 IST)
ಬಳ್ಳಾರಿ ಜಿಲ್ಲೆಗೆ ಎರಡು ದಿನಗಳ ಹಿಂದೆ 400ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು. ಅವರಲ್ಲಿಗ 60 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇವರೆಲ್ಲರೂ ನರ್ಸಿಂಗ್‌ ಎಕ್ಸಾಮ್‌ ಬರೆಯಲು ರಾಜ್ಯಗಳಾದ ಬಿಹಾರ ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಚಂಡೀಗಡದಿಂದ ಎರಡು ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದ್ದರು.
ಇವರುಗಳು ಕೋವಿಡ್‌ ಟೆಸ್ಟ್‌ ಮಾಡಿಸದೇ ರಾಜ್ಯಕ್ಕೆ ಎರಡು ದಿನಗಳ ಹಿಂದೆ ಆಗಮಿಸಿದ್ದರು. ಇವರು ತಂಗಿದ್ದ ಲಾಡ್ಜ್‌ನಲ್ಲಿ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿದ್ದು, ಇವರಲ್ಲಿ 60ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ