ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯವೆಂದು ಸಿಎಂಗೆ ವರದಿ ಸಲ್ಲಿಕೆ
ಶುಕ್ರವಾರ, 4 ಸೆಪ್ಟಂಬರ್ 2020 (11:57 IST)
ಬೆಂಗಳೂರು : ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಪೂರ್ವ ನಿಯೋಜಿತ ಕೃತ್ಯವೆಂದು ಸಿಎಂಗೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸಂಸ್ಥೆ ವರದಿ ಸಲ್ಲಿಕೆ ಮಾಡಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ಸದಸ್ಯ ಮದನ್ ಗೋಪಾಲ್, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ತಕ್ಷಣಕ್ಕೆ ಆಗಿರುವ ಘಟನೆಯಲ್ಲ. ಪೂರ್ವಭಾವಿ ಸಿದ್ಧತೆ ಮಾಢಿಕೊಂಡು ಗಲಭೆ ಮಾಡಿದ್ದಾರೆ. ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುವ ಯತ್ನ ನಡೆದಿದೆ. ಸ್ಥಳೀಯರು, ಒಳಗಡೆ ಇರುವ ಜನರಿಂದಲೇ ಘಟನೆ ಆಗಿದೆ. ಸ್ಥಳೀಯರ ಕೈವಾಡವಿರುವುದು ಕೂಡ ಸ್ಪಷ್ಟವಾಗಿ ಗೊತ್ತಾಗುತ್ತೆ. ಇದು ನಿಗದಿತ ಸಮುದಾಯದ ವಿರುದ್ಧ ನಡೆದಿರುವ ಗಲಾಟೆ. ದೇಶದ ಅರ್ಥವ್ಯವಸ್ಥೆ ಹಾಳು ಮಾಡುವ ಪ್ರಯತ್ನ ನಡೆದಿದೆ. ಇದರಲ್ಲಿ ಎಸ್ ಡಿಪಿಐ, ಪಿಎಫ್ ಐ ಪಾತ್ರವೂ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.