ಬೆಂಗಳೂರು : ಪುನೀತ್ ರಾಜ್ ಕುಮಾರ್ ಜೊತೆ ‘ಮಿಲನ’ ಚಿತ್ರದಲ್ಲಿ ನಟಿಸಿದ ನಟಿ ಪಾರ್ವತಿ ಮೆನನ್ ಇದೀಗ ಮೀಟೂ ಆರೋಪ ಮಾಡಿದ್ದಾರೆ.
ಪಾರ್ವತಿ ಮೆನನ್ ಅವರಿಗೆ 3 ವರ್ಷ ವಯಸ್ಸಿನಲ್ಲಿ ಲೈಂಗಿಕ ಕಿರುಕುಳದ ಅನುಭವವಾಗಿತ್ತಂತೆ. ಆದರೆ 12 ವರ್ಷಗಳ ನಂತರ ಆ ಬಗ್ಗೆ ಅವರಿಗೆ ಅರಿವಿಗೆ ಬಂದಿದೆಯಂತೆ. ಈ ಬಗ್ಗೆ ಈಗ ಪಾರ್ವತಿ ಅವರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ತಿರುವಂತಪುರದಲ್ಲಿ ನಡೆದ ಖಾಸಗಿ ಕಾರ‍್ಯಕ್ರಮದಲ್ಲಿ ಮಾತನಾಡಿರುವ ಅವರು “ನಾನು ಮೂರ್ನಾಲ್ಕು ವರ್ಷದ ಹುಡುಗಿ ಆಗಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆದರೆ ಎಂದೋ ಆದ ಘಟನೆ ಕಿರುಕುಳವನ್ನು ಈಗ ಯಾಕೆ ಹೇಳುತ್ತಿದ್ದಾರೆ ಅಂದುಕೊಳ್ಳಬಹುದು. ಆದರೆ ಸಂತ್ರಸ್ತರ ಸ್ಥಿತಿ, ನೋವು ಅವರಿಗಷ್ಟೇ ಗೊತ್ತಿರುತ್ತೆ. ಆ ಒಂದು ಕಿರುಕುಳ, ಆ ಒಂದು ಘಟನೆ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತೆದೆ. ನನಗೂ ಹಾಗೇ ಆಗಿತ್ತು. 12 ವರ್ಷಗಳ ನಂತರ ನನಗೆ ಆದ ಕಿರುಕುಳ ಅರಿವಿಗೆ ಬಂದಿದೆ” ಎಂದು ಪಾರ್ವತಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.