ಬೆಂಗಳೂರು : ಟೆಕ್ಕಿಯೊಬ್ಬ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.
ಸ್ನೇಹಿತನ ಮನೆಗೆ ಬಂದಿದ್ದ ಟೆಕ್ಕಿ ಸ್ನೇಹಿತನ ಪತ್ನಿಯ ಮೇಲಿನ ಆಸೆಯಿಂದ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಆಗ ಆಕೆ ಜೋರಾಗಿ ಕಿರುಚಿದ ಹಿನ್ನಲೆಯಲ್ಲಿ ಆಕೆಯ ಗಂಡ ಹಾಗೂ ಸ್ನೇಹಿತರು ಟೆಕ್ಕಿಯನ್ನು ಹಿಡಿಯಲು ಯತ್ನಿಸಿದಾಗ ಆತ ಪರಾರಿಯಾಗಿದ್ದಾನೆ.
ಈ ಬಗ್ಗೆ ಮಹಿಳೆಯ ಪತಿ ಬೆಳ್ಳದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಟೆಕ್ಕಿಯನ್ನು ಬಂಧಿಸಿದ್ದಾರೆ.