ನಾವೇನು ಕರ್ನಾಟದಲ್ಲಿ ಇದಿವಾ? ಅಥವಾ ತಮಿಳುನಾಡಿನಲ್ಲಿಯೆ? ಎಂಬ ಪ್ರಶ್ನೆ ಬಸ್ ಪಾಸ್ ನೋಡಿದ್ರೆ ಉದ್ಭವಿಸುತ್ತೆ.ಸಾರಿಗೆ ಬಸ್ ಪಾಸ್ ನಲ್ಲಿಯೂ ಪರಭಾಷೆ ಅಬ್ಬರವಿದೆ.ಕಾರ್ಮಿಕರ ಬಸ್ ಪಾಸ್ ನಲ್ಲಿ ಪರಭಾಷೆಯಲ್ಲಿ ಪ್ರಕಟ,ಹೆಸರು ಮಾತ್ರ ಕನ್ನಡ ಅದರ ಮುಂದೆ ತಮಿಳು ಭಾಷೆಯಲ್ಲಿ ಮುದ್ರಣವಾಗಿದೆ.ಇದನ್ನು ಪರಿಶೀಲಿಸದೇ ಕಟ್ಟಡ ಕಾರ್ಮಿಕ ಫಲಾನುಭವಿಗೆ ಇಲಾಖೆ ಕಾರ್ಮಿಕ ಪಾಸ್ ನೀಡಿದೆ.
ಕೇವಲ ತಮಿಳು ಮಾತ್ರವಲ್ಲ ತೆಲುಗು, ಹಿಂದಿಯಲ್ಲಿ ಹೆಸರು ಬಸ್ ಪಾಸ್ ನಲ್ಲಿ ಮುದ್ರಣವಾಗಿದೆ.ಕಾರ್ಮಿಕರ ಬಸ್ ಪಾಸ್ ಹೆಸರು ಓದಲು ಕಂಡೆಕ್ಟರ್ ಇತರೆ ಭಾಷೆಯೂ ಕಲಿಯಬೇಕಾ?ಈ ರೀತಿ 500ಕ್ಕೂ ಹೆಚ್ಚು ಬಸ್ ಪಾಸ್ ಗಳಲ್ಲಿ ಅನ್ಯ ಭಾಷೆಯಲ್ಲಿ ಮುದ್ರಣವಾಗಿದೆ.ತಮಿಳು ಭಾಷೆಯಲ್ಲಿದ್ದ ಕಾರ್ಮಿಕ ಬಸ್ ಪಾಸ್ ನೋಡಿ ಬಿಎಂಟಿಸಿ ಕಂಡೆಕ್ಟರ್ ಶಾಕ್ ಆಗಿದ್ದಾನೆ.
ಬೊಮ್ಮನಹಳ್ಳಿ ರೂಟ್ ಕಂಡೆಕ್ಟರ್ ಗೆ ಫುಲ್ ಕನ್ಫ್ಯೂಸ್ ಆಗೋಗಿದೆ.ಫೋಟೋ ತೆಗೆದು ಬಿಎಂಟಿಸಿ ಮೇಲಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದ್ದಾರೆ.ಕರ್ನಾಟಕ ಸರ್ಕಾರ ಕಾರ್ಮಿಕರಿಗೆ ಕೊಡ್ತಿರುವ ಬಸ್ ಪಾಸ್ ನಲ್ಲಿ ಅನ್ಯಭಾಷೆ ಪಾರಮ್ಯ.ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಪ್ರಿಂಟ್ ಮಾಡೋದು ಎಷ್ಟು ಸರಿ?ಇದೇನು ಕರ್ನಾಟಕವೇ? ತಮಿಳುನಾಡು ರಾಜ್ಯವೇ?ಕೂಡಲೇ ಇಂಥ ಬಸ್ ಪಾಸ್ ವಾಪಾಸ್ ಪಡೆದು ಕನ್ನಡ ಭಾಷೆಯ ಪಾಸ್ ನೀಡಿ ಎಂದು ಕರವೇ ಗಜಸೇನೆ ಸಂಘಟನೆಯ ಆಗ್ರಹಿಸಿದೆ.