ಊಟ ಮಾಡಲು ಹೋದಾಗ ನಡೆಯಿತು ಅಂಥ ಕೆಲಸ

ಶುಕ್ರವಾರ, 18 ಅಕ್ಟೋಬರ್ 2019 (15:41 IST)
ಊಟ ಮಾಡೋಕೆ ಅಂತ ಹೋಗಿದ್ದ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಂಥ ಕೆಲಸ ನಡೆದು ಹೋಗಿದೆ.

ಮಂಡ್ಯದ ಕಿಕ್ಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ತೆಂಗಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದೆ. ಆದರೆ ಇಲ್ಲಿ ಕಷ್ಟ ಪಟ್ಟು ಬೆಳೆ ಬೆಳೆದ ರೈತನಿಗೆ ಭಾರೀ ಅನ್ಯಾಯವಾಗಿದೆ.

ತೆಂಗಿನ ಕಾಯಿ ಮಾರಾಟಕ್ಕೆಂದು ಮಾರುಕಟ್ಟೆಗೆ ತಂದಿದ್ದ ವೆಂಕಟೇಶ್ ವಡಕಹಳ್ಳಿ ರೈತನ ತೆಂಗಿನಕಾಯಿ ಕಳ್ಳತನವಾಗಿವೆ.
ಸುಮಾರು 4200 ತೆಂಗಿನಕಾಯಿಯನ್ನು ಮಾರಾಟಕ್ಕೆಂದು ತಂದಿದ್ರು. ಆದರೆ ವೆಂಕಟೇಶ್ ಊಟ ಮಾಡಲು ಮಾರುಕಟ್ಟೆಯಿಂದ ಹೊರ ಹೋದಾಗ ಸುಮಾರು 2000 ಕ್ಕಿಂತ ಹೆಚ್ಚು ತೆಂಗಿನ ಕಾಯಿಗಳನ್ನು ಕಳ್ಳತನ ಮಾಡಲಾಗಿದೆ.

ಎಪಿಎಂಸಿ ಅಧ್ಯಕ್ಷ ಐರೋನಹಳ್ಳಿ ಮಲ್ಲೇಶ್ ಭೇಟಿ ನೀಡಿ, ತೆಂಗಿನಕಾಯಿಗಳು ಕಳ್ಳತನವಾದ ಬಗ್ಗೆ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.   ಸಿಸಿ ಕ್ಯಾಮೆರಾ, ವಾಚಮನ್ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ ಅಂತ ಮಲ್ಲೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ