ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ : ಕುಮಾರಸ್ವಾಮಿ

ಭಾನುವಾರ, 26 ಫೆಬ್ರವರಿ 2023 (17:23 IST)
ಚಿಕ್ಕಮಗಳೂರು : ಮೆಡಿಕಲ್ ಕಾಲೇಜಿಗೆ ಸಹಾಯ ಪ್ರಾಧ್ಯಾಪಕರನ್ನ ನೇಮಿಸೋಕೆ ಸಚಿವ ಡಾ.ಕೆ ಸುಧಾಕರ್ 50 ಲಕ್ಷ ರೂ. ಕೇಳಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
 
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್ ನಿನಗೆ ಹಳೇ ಚರಿತ್ರೆ ಗೊತ್ತಿಲ್ಲ ಕಣಪ್ಪ. ನಿನ್ನೆ ಮೊನ್ನೆ ಏನೇನು ಮಾಡಿದ್ದೀಯಾ ಅನ್ನೋದು ಜಗಜ್ಜಾಹೀರಾಗಿದೆ.

ನಿಮಗೆ ಆಸ್ಪತ್ರೆಗೆ ಓರ್ವ ಡಾಕ್ಟರ್ ನೇಮಕ ಮಾಡಲು ಆಗಿಲ್ಲ. ಮೆಡಿಕಲ್ ಕಾಲೇಜ್ಗೆ ಸಹಾಯ ಪ್ರಾಧ್ಯಾಪಕರನ್ನ ನೇಮಿಸೋಕೆ ಏನು ಮಾಡಿದ್ರಿ? ವಿಧಾನಪರಿಷತ್ನಲ್ಲಿ ಪ್ರಮುಖ ಸ್ಥಾನದಲ್ಲಿರುವ ಬಿಜೆಪಿ ನಾಯಕರೊಬ್ಬರ ಮಗಳಿಗೆ ಎಷ್ಟು ಕೇಳಿದ್ರಿ? ಅವರ ಬಳಿ 50 ಲಕ್ಷ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ