ಅಂಬರೀಶ್ ಗೆ ಕಬ್ಬಿನ ಅಲಂಕಾರ ಏಕೆ ಗೊತ್ತಾ?

ಗುರುವಾರ, 6 ಡಿಸೆಂಬರ್ 2018 (18:10 IST)
ಚಲನಚಿತ್ರ ಹಿರಿಯ ನಟ ಹಾಗೂ ಕೇಂದ್ರ ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಗೆ ಅವರ ಅಭಿಮಾನಿಗಳು ವಿನೂತನವಾಗಿ ಗೌರವ ನಮನ ಸಲ್ಲಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬಿ.ಹೊಸೂರು ಗ್ರಾಮದಲ್ಲಿ ಅಭಿಮಾನಿಗಳಿಂದ ಅಗಲಿದ ಚಿತ್ರನಟ ಅಂಬರೀಶ್ ರ ತಿಥಿ ಕಾರ್ಯ ನೆರವೇರಿತು. ಗ್ರಾಮಸ್ಥರು ಅಂಬಿಯ ಪ್ರತಿಮೆಗೆ ಕಬ್ಬಿನಿಂದ ಅಲಂಕಾರ ಮಾಡಿ ಗೌರವ ಸಲ್ಲಿಸಿದರು. ಅಂಬಿ ಪ್ರತಿಮೆಗೆ ನಾಟಿ ಕೋಳಿ, ಮುದ್ದೆ ಎಡೆಯಿಟ್ಟು ನಮನ ಸಲ್ಲಿಸಿದರು.

ಅಂಬಿ ಪ್ರತಿಮೆಯನ್ನು ಕಬ್ಬಿನಿಂದ ಅಲಂಕರಿಸಿ, ಕಬ್ಬಿನ ಹಾರ ಹಾಕಿ ವಂದನೆ ಸಲ್ಲಿಸಲಾಯಿತು. ಅಂಬಿಯನ್ನು ನೆನೆದು ಭಾವುಕರಾಗುತ್ತಿರುವ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಗುಣಗಾನ ಮಾಡಿದರು.

ಅಂಬಿ ಮೃತಪಟ್ಟ ನಂತರ ಬಿ.ಹೊಸೂರು ಗ್ರಾಮದಲ್ಲಿ ಪ್ರತಿಮೆಯನ್ನು ಗ್ರಾಮಸ್ಥರು ಸ್ಥಾಪಿಸಿದ್ದಾರೆ. ಪ್ರತಿಮೆಗೆ ಕಬ್ಬಿನಿಂದ ಅಲಂಕಾರ ಮಾಡಿ, ಕಬ್ಬಿನ ಹಾರ ಹಾಕಿ ತವರು ಜಿಲ್ಲೆಯ ಗೌರವ ಸಲ್ಲಿಸುತ್ತಿರುವ ಅಭಿಮಾನಿಗಳು, ಅಗಲಿದ ಚೇತನಕ್ಕೆ ನಮನ ಸಲ್ಲಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ