ಅಂಬರೀಶ್ ಗೆ ಕುಂಚ ಕಣ್ಣೀರು ನಮನ
ಹಿರಿಯ ಚಿತ್ರನಟ, ಮಾಜಿ ಸಚಿವ ದಿ.ಅಂಬರೀಶ್ ಗೆ ಅವರ ಅಭಿಮಾನಿಗಳು ವಿನೂತನ ನಮನ ಸಲ್ಲಿಸಿದ್ದಾರೆ.
ಅಂಬಿಗೆ ಕುಂಚ ಕಲಾವಿದರಿಂದ ನಮನ ಸಲ್ಲಿಕೆಯಾಗಿದೆ. ಗೋಡೆ ಮೇಲೆ ಅಂಬಿ ಚಿತ್ರ ಬಿಡಿಸಿದ ಕಲಾವಿದರು ಗಮನ ಸೆಳೆದರು.
ಮಂಡ್ಯದ ಸಂಜಯ ವೃತ್ತದಲ್ಲಿ ಮೂಡಿಬಂದ ಅಂಬಿ ಚಿತ್ರ ನೋಡುಗರ ಗಮನ ಸೆಳೆದವು. ಕಲಾವಿದರ ಕುಂಚದಲ್ಲಿ ಮೂಡಿದ ಅಂಬಿ ಚಿತ್ರ, ಅಂಬಿ ಸ್ಮರಣೆ ಮಾಡಿಸಿತು.
ರಾಜೇಶ್, ಲೋಕೇಶ್, ವಿಜಯ್ ಕುಂಚದಲ್ಲಿ ಮೂಡಿ ಬಂದ ಅಂಬಿ ಚಿತ್ರಗಳು. ಅಂಬಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಚಿತ್ರ ಜಾಗೃತಿಯನ್ನೂ ಮೂಡಿಸಲಾಯಿತು.
ಜಾಗೃತಿ ಕಲಾವಿದ ತೂಬಿನಕೆರೆ ಗೋವಿಂದರಿಂದಲೂ ಜಾಗೃತಿ ಚಿತ್ರ ರಚನೆಯಾಯಿತು. ಕುಂಚ ಕಣ್ಣೀರು ಹೆಸರಲ್ಲಿ ಮೂಡಿ ಬಂದ ಅಂಬಿ ಡೈಲಾಗ್ಸ್ ಅಂಬಿ ಅಭಿಮಾನಿಗಳ ಮನಸ್ಸಿಗೆ ತಟ್ಟಿದವು.