ಪ್ಲೇಟ್ ನಿಂದ ಜಿಗಿದ ಹಸಿ ಕೋಳಿ ಮಾಂಸದ ತುಂಡು; ವಿಡಿಯೋ ವೈರಲ್

ಮಂಗಳವಾರ, 30 ಜುಲೈ 2019 (08:55 IST)
ಪ್ಲೋರಿಡಾ : ರೆಸ್ಟೋರೆಂಟ್ ವೊಂದರಲ್ಲಿ ಅಡುಗೆಗೆಂದು ತೆಗೆದಿಟ್ಟ ಹಸಿ ಕೋಳಿ ಮಾಂಸದ ತುಂಡೊಂದು ಪ್ಲೇಟ್ ನಿಂದ ಆಚೆಗೆ ಜಿಗಿದ ವಿಚಿತ್ರ ಘಟನೆಯೊಂದು ನಡೆದಿರುವುದಾಗಿ ತಿಳಿದುಬಂದಿದೆ.
ಫ್ಲೋರಿಡಾದ ರೈ ಫಿಲಿಪ್ಸ್‌ ಎಂಬುವವರು ಈ ವಿಡಿಯೋವನ್ನು ಫೇಸ್‌ ಬುಕ್‌ ನಲ್ಲಿ ಶೇರ್‌ ಮಾಡಿದ್ದು, 32 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು 21 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು, 2.68ಲಕ್ಷ ಜನ ಇದನ್ನು ಶೇರ್ ಮಾಡಿದ್ದಾರೆ. ಅಲ್ಲದೇ ಫೇಸ್ ಬುಕ್ ನಲ್ಲಿ 76,000ಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ.


ಈ ವಿಡಿಯೋದಲ್ಲಿ ಕೋಳಿ ಮಾಂಸದ ತುಂಡು ಪ್ಲೇಟ್ ನಿಂದ ಜಿಗಿದು ಹಾರುತ್ತಿರುವುದನ್ನು ಕಂಡು ಅಲ್ಲಿ ಕುಳಿತಿದ್ದ ಅತಿಥಿಗಳು ಹೌಹಾರಿದ್ದಾರೆ. ಇದು ಯಾವ ರೆಸ್ಟೋರೆಂಟ್ ನಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಫ್ರೆಶ್‌ ಇದ್ದ ಮಾಂಸಕ್ಕೆ  ಉಪ್ಪು ಸವರಿದ್ದರಿಂದ  ಸ್ನಾಯುಗಳು ಸಂಕುಚಿತಗೊಂಡು  ಹಾಗಾಗಿದೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ