ಕರ್ನಾಟಕಕ್ಕೆ ಆಕ್ಸಿಜನ್ ಒದಗಿಸಿ: ಪ್ರಧಾನಿಗೆ ಪತ್ರ ಬರೆದ ಸುಮಲತಾ

ಮಂಗಳವಾರ, 11 ಮೇ 2021 (09:32 IST)
ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ರೋಗಿಗಳಿಗೆ ಅಗತ್ಯವಾದ ಆಕ್ಸಿಜನ್ ಒದಗಿಸಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.


‘ಕಳೆದ ಬಾರಿ ಕೊವಿಡ್ ಪರಿಸ್ಥಿತಿಯನ್ನು ನಿಭಾಯಿಸಿದ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ನಿಮ್ಮ ಉತ್ತಮ ನಾಯಕತ್ವದಲ್ಲಿ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಯಶಸ್ವಿಯಾಗಿದ್ದೆವು. ಈಗ ನಾವು ತೊಂದರೆಯಲ್ಲಿದ್ದೇವೆ.

ಪ್ರಸಕ್ತ ಬೆಂಗಳೂರು ಮತ್ತು ಕರ್ನಾಟಕದ ಎಲ್ಲಾ ಭಾಗದಲ್ಲೂ ಕೊರೋನಾ ಪರಿಸ್ಥಿತಿ ಶೋಚನೀಯವಾಗಿದೆ. ಈಗಿರುವ ಆಕ್ಸಿಜನ್ ಪೂರೈಕೆ ನಮಗೆ ಸಾಕಾಗುತ್ತಿಲ್ಲ. ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.  ಇದಕ್ಕೆ ನಾವು ತಯಾರಾಗಿರಬೇಕು. ಹೀಗಾಗಿ ನಮಗೆ ಅಗತ್ಯವಾದ ಆಕ್ಸಿಜನ್ ಪೂರೈಸಿ’ ಎಂದು ಸುಮಲತಾ ಪತ್ರದಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ