ನಿಖಿಲ್ ಸ್ಪರ್ಧೆಗೆ ವಿರೋಧಿಸುವ ಹೋರಾಟಕ್ಕೆ ಸುಮಲತಾ ಬೆಂಬಲ

ಮಂಗಳವಾರ, 12 ಮಾರ್ಚ್ 2019 (13:57 IST)
ಸ್ವಾಭಿಮಾನಕ್ಕಾಗಿ ಸತ್ಯಾಗ್ರಹ, ಮಂಡ್ಯ ಜಿಲ್ಲೆಯ ಅಸ್ಮಿತೆಗಾಗಿ ಹೋರಾಟ ನಡೆಯುತ್ತಿರುವ ಸ್ಥಳ್ಕಕ್ಕೆ ಸುಮಲತಾ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಂಡ್ಯಕ್ಕೆ ಆಗಮಿಸಿದ ಸುಮಲತಾ ಅಂಬರೀಶ್, ಉಪವಾಸ ನಿರತರನ್ನು ಭೇಟಿಯಾದರು. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸುಮಲತಾ, ಕಾಂಗ್ರೆಸ್ ಮುಖಂಡ ಡಾ.ರವೀಂದ್ರರಿಂದ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.

ನಿಖಿಲ್ ಸ್ಪರ್ಧೆ ವಿರೋಧಿಸಿ, ಸ್ಥಳೀಯಯರಿಗೇ ಟಿಕೆಟ್ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಸುಮಲತಾ ಬೆಂಬಲ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಸತ್ಯಾಗ್ರಹ ನಿರತರನ್ನ ಭೇಟಿಯಾಗಿ ಚರ್ಚೆ ನಡೆಸಿರುವ ಸುಮಲತಾ ತಮ್ಮ ರಾಜಕೀಯ ದಾಳವನ್ನು ಉರುಳಿಸಲು ಯತ್ನ ಮುಂದುವರಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ