ಸುನಾಮಿ ಕಿಟ್ಟಿಯ ಕಿರಿಕ್ ..!
ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಆತನ ಗೆಳೆಯ ಚೇತನ್ ಗೌಡ ಮೇಲೆ ಹಲ್ಲೆ ಅರೋಪ ಕೇಳಿ ಬಂದಿದೆ. ನಗರದ ಪ್ರತಿಷ್ಠಿತ ಪಬ್ಗಳಲ್ಲಿ ಒಂದಾದ ಮಿರಾಜ್ ಪಬ್ಗೆ ಹೋಗಿದ್ದ ಕಿಟ್ಟಿ ಅಂಡ್ ಟೀಮ್ ಕಂಠ ಪೂರ್ತಿ ಕುಡಿದು, ಬಳಿಕ ಶಾಂಪೇನ್ ಬಾಟೆಲ್ ಒಪನ್ ಮಾಡಿದ್ದಾರೆ. ಶಾಂಪೇನ್ ಬಾಟಲ್ ಒಪನ್ ಮಾಡಿದಾಗ ಅಕ್ಕ-ಪಕ್ಕದಲ್ಲಿದ್ದ ಕೃಷ್ಣ ಮತ್ತು ಪ್ರಶಾಂತ್ ಎಂಬುವವರ ಮೇಲೆ ಚಲ್ಲಿದೆ. ನಂತರ ಕೃಷ್ಣ ಮತ್ತು ಪ್ರಶಾಂತ್ ಶಾಂಪೇನ್ ಚೆಲ್ಲಿದ್ದನ್ನು ಕೇಳಲು ಹೋದಾಗ ಸುನಾಮಿ ಕಿಟ್ಟಿ ಮತ್ತು ಆತನ ಗೆಳೆಯ ಚೇತನ್ ಗೌಡ ಗಲಾಟೆ ಮಾಡಿದ್ದಾರೆ. ಪ್ರಶಾಂತ್ ಹಾಗೂ ಕೃಷ್ಣ ಎಂಬುವವರ ಮೇಲೆ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೆ ಸುನಾಮಿ ಕಿಟ್ಟಿ ಸ್ನೇಹಿತ ಚೇತನ್ ಸಹ ಠಾಣೆಗೆ ಪ್ರತಿ ದೂರು ಸಲ್ಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಮದ್ಯ ಚೆಲ್ಲಿದ್ದ ಕಾರಣಕ್ಕೆ ನಮ್ಮ ಜೊತೆಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.