ಅಧಿಕಾರಿ ಹಣೆಗೆ ಕುಂಕುಮವಿಟ್ಟ ಸುನೀಲ್ ಬೋಸ್: ವೈವಾಹಿಕ ಜೀವನದ ಬಗ್ಗೆ ಮುಚ್ಚಿಟ್ರ ಸಂಸದರು

Sampriya

ಸೋಮವಾರ, 29 ಜುಲೈ 2024 (10:22 IST)
Photo Courtesy X
ಮೈಸೂರು: ತನಗೆ ಮದುವೆಯಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದ ಸಂಸದ ಸುನೀಲ್ ಬೋಸ್ ಅವರು ಚಾಮುಂಡೇಶ್ವರಿ ದೇವಿ ಗರ್ಭಗುಡಿಯಲ್ಲಿ ಕೆಎಎಸ್ ಅಧಿಕಾರಿ ಹಣೆಗೆ ಕುಂಕುಮ ಇಟ್ಟು ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.

ಚಾಮರಾಜನಗರ ಲೋಕಸಭೆ ಕ್ಷೇತ್ರದ ಸಂಸದರಾಗಿರುವ ಸುನೀಲ್ ಬೋಸ್ ಅವರು, ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇಬ್ಬರು ಜತೆಯಾಗಿ ಬಂದಿದ್ದಾರೆ.  ಈ ವೇಳೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿಯಾಗಿರುವ ಸವಿತಾ ಅವರ ಹಣೆಗೆ ದೇವಿ ಗರ್ಭಗುಡಿ ಎದುರು ಹಣೆಗೆ ಕುಂಕುಮ ಇಟ್ಟಿದ್ದಾರೆ. ಅದಲ್ಲದೆ ಅರ್ಚಕರು ಸಲ್ಲಿಸಿದ ವಿಶೇಷ ಪೂಜೆಯ ಪ್ರಸಾದವನ್ನು ಸಚಿತಾ ಅವರು ಸ್ವೀಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ.

ಇನ್ನೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸುನೀಲ್ ಬೋಸ್ ಅವರು ತಮ್ಮ ಅಫಿಡವಿಟ್‌ನಲ್ಲಿ ವೈವಾಹಿಕ ಜೀವನದ ಬಗ್ಗೆ ಮದುವೆಯಾಗಿಲ್ಲ ಎಂದು ಉಲ್ಲೇಖ ಮಾಡಿದ್ದರು.  ಈ ಬಗ್ಗೆ ಚಾಮರಾಜನಗರ ಜಿಲ್ಲೆಯ ಬಿಜೆಪಿ ಸದಸ್ಯರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನಲ್ಲಿ: ಸುನೀಲ್ ಬೋಸ್ ಅವರಿಗೆ ಮದುವೆಯಾಗಿದೆ.  ಆದರೆ ಅವರು ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. ಸುನೀಲ್‌ಬೋಸ್ ಹಾಗೂ ಸವಿತಾ ಅವರು ಜೊತೆಯಲ್ಲಿ ಇರುವ ಪೋಟೋಗಳನ್ನು ಬಿಜೆಪಿ ಸದಸ್ಯರು ಚುನಾವಣಾ ಆಯೋಗಕ್ಕೆ ಪುರಾವೆಯಾಗಿ ನೀಡಿದ್ದರು. ಅವರಿಗೆ ಮದುವೆಯಾಗಿದ್ದು 6 ವರ್ಷದ ಮಗಳಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ