ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿಸಿಲು ನಗರಿ ತುಂಬೆಲ್ಲ ಬಣ್ಣದ ಚಿತ್ತಾರ
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಸೂಫಿ-ಸಂತರ ನಾಡು ಕಲಬುರಗಿಯಲ್ಲಿ ನಗರ ಸೌಂದರ್ಯೀಕರಣಗೊಳ್ಳುತ್ತಿದೆ.
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದ ವರೆಗೆ ವಿದ್ಯುತ್ ಕಂಬಕ್ಕೆ ಅಲಂಕಾರ ಸಮಿತಿಯಿಂದ ಬೋರ್ಡ್‍ಗಳ ಅಳವಡಿಕೆ ಕಾರ್ಯ ನಿರಂತರ ಸಾಗಿದೆ.
ರಸ್ತೆ ವಿಭಜಕಗಳಿಗೆ ಸುಣ್ಣ ಬಣ್ಣ ಹಚ್ಚುವ ಕೆಲಸ, ರಸ್ತೆ ಬದಿ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಮತ್ತು ನುಡಿ ಸಮ್ಮೇಳನಕ್ಕೆ ಆಗಮಿಸುವ ಬರಹಗಳು ಎಲ್ಲೆಡೆ ಬರೆಯಲಾಗುತ್ತಿದೆ.
ನುಡಿ ಸಮ್ಮೇಳಕ್ಕೆ ಇನ್ನೇನೂ ಒಂದು ವಾರ ಬಾಕಿ ಇರುವ ಹಿನ್ನೆಲೆಯಲ್ಲಿ ನಗರವನ್ನು ಮದುವಣಗಿತ್ತಿಯಂತೆ ಸಿಂಗರಿಸಲು ಎಲ್ಲಾ ಸಮಿತಿಗಳು ಯುದ್ದೋಪಾದಿಯಲ್ಲಿ ತಮ್ಮ ಕೆಲಸಗಳನ್ನು ಆರಂಭಿಸಿವೆ.