ನಾಳೆ ಭಾರತ್ ಬಂದ್ ಗೆ ಖಾಸಗಿ ಶಾಲಾ ಒಕ್ಕೂಟದಿಂದ ಬೆಂಬಲ; ನಾಳೆ 1 ದಿನ ಆನ್ ಲೈನ್ ಕ್ಲಾಸ್ ಇರಲ್ಲ
ಸೋಮವಾರ, 7 ಡಿಸೆಂಬರ್ 2020 (11:30 IST)
ಬೆಂಗಳೂರು : ನಾಳೆ ಭಾರತ್ ಬಂದ್ ಹಿನ್ನಲೆಯಲ್ಲಿ ಖಾಸಗಿ ಶಾಲಾ ಒಕ್ಕೂಟದಿಂದ ಬೆಂಬಲ ಸೂಚಿಸಲಾಗಿದೆ.
ನಾಳೆ ರೈತರ ಸಂಘಟನೆಗಳು ಭಾರತ್ ಬಂದ್ ಗೆ ಕರೆ ಕೊಟ್ಟಿದೆ. ಹಾಗಾಗಿ ಖಾಸಗಿ ಶಾಲಾ ಒಕ್ಕೂಟ ಈ ಬಂದ್ ಗೆ ಬೆಂಬಲ ಸೂಚಿಸಿದೆ. ಈ ಹಿನ್ನಲೆಯಲ್ಲಿ ನಾಳೆ 1 ದಿನ ಆನ್ ಲೈನ್ ಕ್ಲಾಸ್ ಇರಲ್ಲ ಎಂದು ತಿಳಿಸಿದೆ.
ಆನ್ ಲೈನ್ ಕ್ಲಾಸ್ ನಡೆಸದೆ ಆ ಮೂಲಕ ಬಂದ್ ಗೆ ಬೆಂಬಲ ನೀಡಲು ಖಾಸಗಿ ಶಾಲಾ ಒಕ್ಕೂಟ ತೀರ್ಮಾನ ಮಾಡಿದೆ ಎನ್ನಲಾಗಿದೆ.