ಸುಪ್ರೀಂ ಕೋರ್ಟ್ ಗೆ ರಾಜ್ಯಚುನಾವಣ ಅಯೋಗ ಪತ್ರ
ಬೆಂಗಳೂರು : ನಿಗದಿತ ಸಮಯಕ್ಕೆ ಬಿ.ಬಿ.ಎಂ.ಪಿ ಗೆ ಚುನಾವಣೆ ನಡೆಸುವಂತೆ ಕಾಂಗ್ರೇಸ್ ನ ಮಾಜಿ ಸದಸ್ಯರಾದ ಎಂ ಶಿವರಾಜ್ ಹಾಗೂ ಅಬ್ದುಲ್ ವಾಜೀದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದು.ರಾಜ್ಯಚುನಾವಣಾ ಆಯೋಗ 50ಪುಟ ಪತ್ರ ಬರೆದಿದೆ. ಬಿ.ಬಿ.ಎಂ.ಪಿ ಯ ಸದಸ್ಯರ ಆಡಳಿತಾವದಿ 2020 ರ. ಸೆಪ್ಟಂಬರ್ ಗೆ ಮುಗಿದಿದೆ.ಅವದಿಗೂ ಮುನ್ನವೇ ಶಿವರಾಜ್ ರವರು ರಾಜ್ಯ ಉಚ್ಚನ್ಯಾಯಾಲಯಕ್ಕೆ ನಿಗದಿತ ಸಮಯಕ್ಕೆಚುನಾವಣೆ ನಡೆಸಬೇಕದು ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದರು.ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಕಾರಣ ಕೇಳಿ ನೋಟಿಸ್ ಜಾರಿಮಾಡಿತ್ತು.ನೋಟಿಸ್ ಗೆಉತ್ತರನೀಡಿದ್ದ ಸರ್ಕಾರ ವಾರ್ಡ್ ಗಳ ವಿಂಗಡನೆಯಾಗಬೇಕು.ಜನಸಂಖ್ಯೆ ಗೆ ಅನುಗುಣವಾಗಿ ಮತದಾರರ ಪಟ್ಟಿ ಸಿದ್ದಪಡಿಸಬೇಕು.2011 ಜನಗಣತಿಯ ಆಧಾರದ ಮೇಲೆ ಮಾಡಬೇಕು ಆದ್ದರಿಂದ ಸಮಯವಕಾಶವನ್ನು ಕೇಳಿತ್ತು.ಅದಕ್ಕೆ ರಾಜ್ಯ ಸರ್ಕಾರಕ್ಕೆ ಉಚ್ಚನ್ಯಾಯಲಯ ಎರಡು ತಿಂಗಳ ಒಳಗೆ ಪ್ರಕ್ರಿಯೇ ಮುಗಿಸುವಂತೆ ಸೂಚಿಸಿತ್ತು. ಸರಕಾರ ಸುಪ್ರೀಂ ಗೆ ಮೊರೆಹೋಗಿತ್ತು. ಸುಪ್ರೀಂ ಕೋರ್ಟ್ ಗೆ ರಾಜ್ಯಚುನಾವಣ ಆಯೋಗ 50 ಪುಟಗಳ ಪತ್ರ ಬರೆದಿದೆ.ಚುನಾವಣೆ ನಡೆಸುವಂತೆ ಪತ್ರದಲ್ಲಿ ಉಲ್ಲೇಖವಾಗಿದೆ.ಈ ತಿಂಗಳಾಂತ್ಯದಲ್ಲಿ ಸಾರ್ವಜನಿಕ ಅರ್ಜಿವಿಚಾರಣೆಗೆ ಬರಲಿದೆ.ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಬಿ.ಬಿ.ಎಂ.ಪಿ ಚುನಾವಣೆ ಭವಿಷ್ಯ ನಿರ್ದಾರವಾಗಲಿದೆ.