ರಾಜ್ಯ ಕಾಂಗ್ರೆಸ್‌ನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಡಿ.ಕೆ ಶಿವಕುಮಾರ್, ನಯಾ ಗೇಮ್ ಶುರು ಮಾಡಿದ್ದಾರೆ.. ಸಿದ್ದರಾಮಯ್ಯ ಆಪ್ತರಿಗೂ ಡಿಕೆಶಿ ಗಾಳ ಹಾಕಿದ್ದಾರೆ.ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ ಡಿಕೆಶಿ.ಕೈ ಪಾಳಯದಲ್ಲಿನ ಗುಂಪುಗಾರಿಕೆ ವಿಚಾರ ಹೈಕಮಾಂಡ್ ಅಂಗಳಕ್ಕೆ ಹೋಗಿದೆ. ಮುಂದಿನ ಸಿಎಂ ಯಾರೆಂಬ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪೈಪೋಟಿಗೆ ಬಿದ್ದಿರೋದು, ಹೈ ನಾಯಕರ ಕಣ್ಣು ಕೆಂಪಾಗಿಸಿದೆ. ಈ ಕಡೆ ಸುರ್ಜೇವಾಲಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಹವಾಸವೇ ಬೇಡ ಎನ್ನುತ್ತಿರೋದ್ರಿಂದ ಮತ್ತಷ್ಟು ಡ್ಯಾಮೇಜ್ ಆಗಿದೆ. ಬಣ ರಾಜಕೀಯದಿಂದ ಎಚ್ಚೆತ್ತಿರೋ ಡಿಕೆಶಿ, ಎಲ್ಲಾ ಶಾಸಕರ ವಿಶ್ವಾಸ ಗಳಿಸಲು ಡಿನ್ನರ್ ಪಾಲಿಟಿಕ್ಸ್‌ಗೆ ಮುಂದಾಗಿದ್ದಾರೆ. ಇಂದು ರಾತ್ರಿ ಸದಾಶಿವನಗರದ ನಿವಾಸದಲ್ಲಿ ಬೆಂಗಳೂರಿನ ಎಲ್ಲಾ ಶಾಸಕರಿಗೆ ಆಹ್ವಾನ ಕೂಡ ನೀಡಿದ್ದಾರೆ.ಇನ್ನು ಸಿದ್ದರಾಮಯ್ಯ ಸೇರಿ ಬೆಂಗಳೂರಿನ ಶಾಸಕರಿಗೆ ಡಿಕೆ ಸಾಬ್ ಆಹ್ವಾನ ಕೊಟ್ಟಿದ್ದಾರೆ. ಆದ್ರೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್‌ಗೆ ಆಹ್ವಾನ ಕೊಟ್ಟಿಲ್ವಂತೆ. ನಂಗೆ ಆಹ್ವಾನವೇ ಬಂದಿಲ್ಲ ಅಂತ ಜಮೀರ್ ಅಹ್ಮದ್ ಹೇಳಿದ್ದಾರೆ. ಈ ಕಡೆ ಡಿ.ಕೆ ಶಿವಕುಮಾರ್ ಮೇಲೆ ಮುನಿಸಿಕೊಂಡಿರೋ ಅಖಂಡ ಶ್ರೀನಿವಾಸ್‌ಗೂ, ಡಿಕೆ ಆಪ್ತರ ಕಡೆಯಿಂದ ಆಹ್ವಾನ ಹೋಗಿದೆ. ಪದೇ ಪದೇ ಮುಂದಿನ ಸಿಎಂ ಸಿದ್ದರಾಮಯ್ಯ ಅಂತಿರೋ ಜಮೀರ್‌ಗೆ ಮಾತ್ರ ಡಿಕೆ ಡಿನ್ನರ್ ಮೀಟಿಂಗ್‌ಗೆ ಕರೆದಿಲ್ಲ.ಇತ್ತೀಚಿನ ಬೆಳವಣಿಗೆಗಳಿಂದ ಡಿ.ಕೆ ಮೇಲೆ ಹೈಕಮಾಂಡ್ ನಾಯಕರೂ ಕೂಡ ಗರಂ ಆಗಿದ್ದಾರೆ. ಕೆ.ಎಚ್ ಮುನಿಯಪ್ಪ ಕೂಡ ಇತ್ತೀಚೆಗೆ ದೆಹಲಿಗೆ ಹೋಗಿ ಡಿ.ಕೆ, ಸಿದ್ದು ಗುಂಪುಗಾರಿಕೆ ವಿರುದ್ದ ಕಂಪ್ಲೇಂಟ್ ಕೊಟ್ಟಿದ್ರು. ಇನ್ನೊಂದು ಕಡೆ ಪದೇ ಪದೇ ಸಿದ್ದರಾಮಯ್ಯ ನಿವಾಸಕ್ಕೆ ಪ್ರಮುಖ ಶಾಸಕರು ಬೇಟಿ ಕೊಟ್ಟು ಗುಪ್ತ್ ಗುಪ್ತ್ ಮೀಟಿಂಗ್ ನಡೆಸ್ತಿರೋದೂ ಕೂಡ, ಡಿಕೆಗೆ ತಲೆ ಬಿಸಿ ತಂದಿತ್ತು. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಕೆಶಿ ಡಿನ್ನರ್ ಪಾಲಿಟಿಕ್ಸ್ ಮೊರೆ ಹೋಗಿದ್ದಾರೆ.