ಕಾವೇರಿ ನೀರು ಹಂಚಿಕೆ ವಿವಾದ ಇಂದು ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಸೋಮವಾರ, 5 ಸೆಪ್ಟಂಬರ್ 2016 (10:14 IST)
ಕಾವೇರಿ ನೀರು ಹಂಚಿಕೆ ಸಂಬಂಧ ಕರ್ನಾಟಕ ವಿರುದ್ಧ ತಮಿಳುನಾಡು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಸುಪ್ರಿಂ ಕೋರ್ಟ್ ಪೀಠದ ಮುಂದೆ ವಿಚಾರಣೆ ಇವತ್ತು ಮುಂದುವರಿಯಲಿದೆ. ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಮುಂದೆ ಕಾವೇರಿ ಜಲ ಪರಿಸ್ಥಿತಿ ಬಗ್ಗೆ ವಾಸ್ತವಾಂಶವನ್ನು  ಮನವರಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. 

 
ಕಳೆದ ಶುಕ್ರವಾರ ಈ ಕುರಿತು ವಿಚಾರಣೆ ಪ್ರಾರಂಭಿಸಿದ್ದ ನ್ಯಾಯಪೀಠ ಉಭಯ ರಾಜ್ಯಗಳ ವಾದವನ್ನ ಆಲಿಸಿತ್ತು. ಪರಸ್ಪರ ಸೌಹಾರ್ದ ಭಾವದಿಂದ ಪ್ರಕರಣ ಬಗೆಹರಿಸಿಕೊಳ್ಳುವಂತೆ ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಮುಂಡೂಡಿದ್ದರು. 
 
ಸುಪ್ರಿಂ ಕೋರ್ಟ್ ನ್ಯಾಯಪೀಠದ ಅಭಿಪ್ರಾಯದಂತೆ ಸ್ವಲ್ಪ ಪ್ರಮಾಣದ ನೀರು ಬಿಡುವುದು ಅನಿವಾರ್ಯ ಆಗಬಹದು ಎಂದು ತರ್ಕಿಸಲಾಗಿದೆ. ಈ ಸಂಬಂಧ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರೊಂದಿಗೆ ದಿಲ್ಲಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯದ ಪರ ವಕೀಲ ಎಫ್. ಎಸ್ ನಾರಿಮನ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. 
 
ಸುಪ್ರಿಂಕೋರ್ಟ್ ತೀರ್ಪಿನ ಅನ್ವಯ ನೀರು ಬಿಡುವ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ. ಆದ್ರೆ ರಾಜ್ಯದಲ್ಲಿ ನೀರಿಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು, ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ಸುಪ್ರಿಂ ಕೋರ್ಟ್ ಮುಂದೆ ವಾದ ಮಂಡಿಸಲು ರಾಜ್ಯದ ಪರ ವಕೀಲರಾದ ನಾರಿಮನ್ ತಂಡ ಸಿದ್ಧವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ