ಸುಪ್ರೀಂ ಕೋರ್ಟ್​ ಆದೇಶ ಪಾಲಿಸಬಾರದು

ಗುರುವಾರ, 21 ಸೆಪ್ಟಂಬರ್ 2023 (20:14 IST)
ಸುಪ್ರೀಂ ಕೋರ್ಟ್​ನಲ್ಲಿ‌ ನಮಗೆ ನ್ಯಾಯ ಸಿಗುವ ಭರವಸೆ ಇತ್ತು.. ಆದರೆ ಈ ದಿನ ಕರ್ನಾಟಕದ ಪಾಲಿಗೆ ಕರಾಳ ದಿನ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.. ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ನಮಗೆ ಸುಪ್ರೀಂ ಕೋರ್ಟ್​ನಲ್ಲಿಯೂ ನ್ಯಾಯ ಸಿಕ್ಕಿಲ್ಲ. ಪ್ರಾಧಿಕಾರದ ಆದೇಶವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.. ನಮಗೆ ಉಳಿದಿರುವುದು ಸುಪ್ರೀಂ ಕೋರ್ಟ್ ಅದೇಶವನ್ನ ಧಿಕ್ಕರಿಸುವುದೊಂದೇ ದಾರಿ.. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಒಂದು ತೀರ್ಮಾನಕ್ಕೆ ಬರಬೇಕು.. ನಾವೆಲ್ಲ ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ರು.. ಇನ್ನು ಕಾವೇರಿಗಾಗಿ ಜೈಲಿಗೆ ಹೊಗಲು ಸಿದ್ಧರಿದ್ದೇವೆ.. ಬಂಗಾರಪ್ಪನವರು ಈ ಹಿಂದೆ ಸುಗ್ರಿವಾಜ್ಞೆ ತಂದು ಸುಪ್ರೀಂ ಕೋರ್ಟ್​ ಆದೇಶ ಧಿಕ್ಕರಿಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಈಗ ಅದೇ ರೀತಿ ಸುಗ್ರಿವಾಜ್ಞೆ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ