ಜಯಲಲಿತಾ ವಿರುದ್ಧದ ಪ್ರಕರಣದ ಅರ್ಜಿ ವಜಾ

ಬುಧವಾರ, 5 ಏಪ್ರಿಲ್ 2017 (17:04 IST)
ಜಯಲಲಿತಾ ಅವರನ್ನು ದೋಷಿಯಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
 
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪು ಮರಪರಿಶೀಲಿಸುವಂತೆ ಸರಕಾರ ಅರ್ಜಿ ಸಲ್ಲಿಸಿತ್ತು. ಕೆಳ ಹಂತದ ನ್ಯಾಯಾಲಯ 100 ಕೋಟಿ ರೂಪಾಯಿ ದಂಡ ವಿಧಿಸಿತ್ತು. ದಂಡವನ್ನಾದರೂ ವಸೂಲಿ ಮಾಡುವಂತೆ ನ್ಯಾಯಾಲಯವನ್ನು ಕೋರಿತ್ತು.
 
ತಮಿಳುನಾಡಿನ ದಿವಂಗತ ಮಾಜಿ ಸಿಎಂ ಜಯಲಲಿತಾ ನಿಧನದ ನಂತರ ತೀರ್ಪು ಬಂದಿರುವುದರಿಂದ ತೀರ್ಪು ಮರುಪರಿಶೀಲನೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ