ಜಯಾ ಅನಾರೋಗ್ಯ: ವದಂತಿ ಹರಡಿದವರಿಗೆ ಬಿಡುಗಡೆ ಇಲ್ಲ

ಮಂಗಳವಾರ, 25 ಅಕ್ಟೋಬರ್ 2016 (10:23 IST)
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವದಂತಿ ಹರಡಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವವರನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. 
ಬಂಧಿತರ ಬಿಡುಗಡೆ ಕೋರಿ ತಮಿಳುನಾಡಿನ ಸಾಮಾಜಿಕ ಕಾಯಕರ್ತ ಟ್ರಾಫಿಕ್ ರಾಮಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
 
ಜಯಾ ಆರೋಗ್ಯದ ಬಗ್ಗೆ ವದಂತಿ ಆರೋಪ ಸೇರಿದಂತೆ ತಮ್ಮ ವಿರುದ್ಧ ಸಹ ಹಲವಾರು ಕಾಯ್ದೆಯಡಿ ಎಫ್ಐಆರ್ ದಾಖಲಾಗಿದ್ದು, ತಮ್ಮ ಬಂಧನವನ್ನು ಸಹ ತಪ್ಪಿಸಬೇಕೆಂದು ರಾಮಸ್ವಾಮಿ ಕೋರ್ಟ್‌ನಲ್ಲಿ ಒತ್ತಾಯಿಸಿದ್ದರು.
 
ಆದರೆ ಈ ಅರ್ಜಿಯನ್ನು ಸಹ ಪರಿಗಣಿಸಿದ ಕೋರ್ಟ್ ಅರ್ಜಿದಾರರು ಕಾನೂನು ಪ್ರಕಾರ ಪರಿಹಾರ ಕಂಡುಕೊಳ್ಳುವುದಕ್ಕೆ ಮುಕ್ತರು ಎಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ