ಚಲುವರಾಯಸ್ವಾಮಿ ಓರ್ವ ರಾಜಕೀಯ ವ್ಯಭಿಚಾರಿ- ಸುರೇಶ್ ಗೌಡ ವಾಗ್ದಾಳಿ

ಶನಿವಾರ, 19 ಅಕ್ಟೋಬರ್ 2019 (12:26 IST)
ಮಂಡ್ಯ : ಚಲುವರಾಯಸ್ವಾಮಿ ಓರ್ವ ರಾಜಕೀಯ ವ್ಯಭಿಚಾರಿ ಎಂದು ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ನಾಗಮಂಗಲದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಲುವರಾಯಸ್ವಾಮಿ ಓರ್ವ ರಾಜಕೀಯ ವ್ಯಭಿಚಾರಿ, ಕುತಂತ್ರಿ. ಅವರು ಕೊಡಿಸಿದ ಅನುದಾನ ಎಲ್ಲಿ ಬಂತು?ಎಲ್ಲಿ ಹೋಯಿತು? ಬೆಳಿಗ್ಗೆ ಯಾರ ಬಳಿ ಹೋಗೋಣ? ಸಂಜೆ ರಾತ್ರಿ ಯಾರ ಹತ್ತಿರ ಹೋಗಿ ರಾಜಕಾರಣ ಮಾಡೋಣ ಅಂತ ಪಿಎಚ್ ಡಿ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯ ಮಾಡಿದ್ದಾರೆ.


‘ಬೆಳಿಗ್ಗೆ ಒಂದು ಮನೆಗೆ , ರಾತ್ರಿ ಒಂದು ಮನೆಗೆ ಹೋಗಿ ರಾಜಕಾರಣ  ಮಾಡುವವರನ್ನು ವ್ಯಭಿಚಾರಿ ಅನ್ನದೆ ಏನೆಂದು ಹೇಳಬೇಕು. ದುಡ್ಡು, ಅಧಿಕಾರಕ್ಕಾಗಿ ಚಲುವರಾಯಸ್ವಾಮಿ ಏನು ಬೇಕಾದರೂ ಮಾಡುತ್ತಾರೆ. ಅವರೆಲ್ಲ ದೊಡ್ಡವರು, ಸ್ವಯಂ ಘೋಷಿತ ರಾಜ್ಯ ನಾಯಕರು’ ಎಂದು ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ