ಸಕ್ಕರೆ ಮಂಡ್ಯದಲ್ಲಿ ಸಿಡಿದೆದ್ದ ಕಬ್ಬು ಬೆಳೆಗಾರ

ಬುಧವಾರ, 16 ಅಕ್ಟೋಬರ್ 2019 (18:42 IST)
ಕಬ್ಬು ಬೆಳೆಗಾರರು ಮತ್ತೆ ಸಿಡಿದೆದ್ದಿದ್ದಾರೆ.

ಮಂಡ್ಯದ ಮಾಕವಳ್ಳಿಯ ಕೋರಮಂಡಲ ಸಕ್ಕರೆ ಕಾರ್ಖಾನೆ ವಿರುದ್ಧ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ.
ಕೋರಮಂಡಲ ಸಕ್ಕರೆ ಕಾರ್ಖಾನೆಯು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ರೈತರ ಕಬ್ಬು ತೆಗೆದುಕೊಳ್ಳಲು ತಕರಾರು ಮಾಡುತ್ತಿದೆ ಎಂದು ದೂರಿದ್ರು.   

ಮಂಡ್ಯ ಕೃಷ್ಣರಾಜಪೇಟೆಯ ಕಬ್ಬನ್ನು ಒಪ್ಪಿಗೆ ಪಡೆದು 15 ರಿಂದ 16 ತಿಂಗಳಾದ್ರು ಕಟಾವು ಮಾಡುತ್ತಿಲ್ಲ.

ತೆಗಿಂನಘಟ್ಟ ಕೋರಮಂಡಲ ಸಕ್ಕರೆ ಕಾರ್ಖಾನೆಯ ಕಛೇರಿಗೆ ಬೀಗ ಜಡಿದು ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದ್ರು.

ಸ್ಥಳಕ್ಕೆ ವಿಭಾಗದ ಹಿರಿಯ ಅಧಿಕಾರಿ ಕೆ.ಬಾಬುರಾಜ್ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ರೈತರು ಅಧಿಕಾರಿ ವಿರುದ್ಧ ಗರಂ ಆಗಿ ಪ್ರತಿಭಟನೆ ತೀವ್ರಗೊಳಿಸಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ