ನಗ್ನವಾಗಿ ವಿದ್ಯಾರ್ಥಿ ನೇಣಿಗೆ ಶರಣು!

ಸೋಮವಾರ, 6 ಫೆಬ್ರವರಿ 2023 (11:10 IST)
ಧಾರವಾಡ : ಧಾರವಾಡ ಕೃಷಿ ವಿವಿ ವಿದ್ಯಾರ್ಥಿಯೋರ್ವ ನಗ್ನವಾಗಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿ ರೋಹಿತ್ ಸಿ.ಪಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ (ಭಾನುವಾರ) ಮಧ್ಯಾಹ್ನ ಹಾಸ್ಟೆಲ್ ಮೆಸ್ನಲ್ಲಿ ಊಟ ಮಾಡಿದ ಈತ, ನಂತರ ಹಾಸ್ಟೆಲ್ ರೂಂಗೆ ಹೋಗಿದ್ದಾನೆ.

ಅದರ ನಂತರ ಆತನ ಗೆಳೆಯರು ಹಾಗೂ ಕುಟುಂಬದವರಯ ಎಷ್ಟೇ ಮೊಬೈಲ್ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಿಟಕಿಯಿಂದ ಓರ್ವ ವಿದ್ಯಾರ್ಥಿ ನೋಡಿದಾಗ ರೋಹಿತ್ ಹಾಸ್ಟೆಲ್ ರೂಂನಲ್ಲಿ ನೇಣು ಹಾಕಿಕೊಂಡ ವಿಷಯ ಗೊತ್ತಾಗಿದೆ.

ತಕ್ಷಣ ಹಾಸ್ಟೆಲ್ ವಾರ್ಡನ್ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ಪೊಲೀಸರಿಗೆ ಹಾಗೂ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ