ವಿದೇಶಿ ಪ್ರಜೆಗಳು, ಅಕ್ರಮ ವಲಸಿಗರಿಂದ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಣ್ಗಾವಲು

ಗುರುವಾರ, 16 ಸೆಪ್ಟಂಬರ್ 2021 (20:43 IST)
ವಿದೇಶಿ ಪ್ರಜೆಗಳು ಮತ್ತು ಅಕ್ರಮ ವಲಸಿಗರಿಂದ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಣ್ಗಾವಲು ನೀಡಲಾಗಿದೆ. ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಮುನಿರಾಜುಗೌಡ 
ಅನಧಿಕೃತ ಬಾಂಗ್ಲಾ ಮತ್ತು ರೋಹಿಂಗ್ಯಾ ಮುಸಲ್ಮಾರನ ಗುರುತಿಸಲಾಗಿದೆಯಾ,
ದೇಶದ್ರೋಹಿ ಚಟುವಟಿಕೆ ನಡೆಯುತ್ತಿದ್ದರೂ ಕ್ರಮವಿಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಕೌಶಲ್ಯ,
ಸರ್ಕಾರಕ್ಕೆ ಬದ್ದತೆ ಇದೆ, ಅಕ್ರಮ ವಲಸಿಗರು ನೆಲಸಿದ್ದಾರೆ ಕಣ್ಗಾವಲು ಇಡಲು ಸೂಚಿಸಲಾಗಿದೆ ರೋಹಿಂಗ್ಯಾ ಸಮುದಾಯದವರು ಹೊರಹಾಕಲು ಕೇಂದ್ರದ ಮಾರ್ಗಸೂಚಿ ಇನ್ನು ಬಂದಿಲ್ಲ. ಅವರೆಲ್ಲಾ ಆರು ಕ್ಯಾಂಪ್ ಗಳಲ್ಲಿ 190 ಜನ ನೆಲಸಿದ್ದಾರೆ, ವಿದೇಶಿಗರ ಚಲನವಲನ ಗಮನಿಸಲು ಸೂಚಿಸಲಾಗಿದೆ. ಆಂತರಿಕ ಭದ್ರತಾ ವಲಸಿಗರ ವಸತಿ ಪರಿಶೀಲನೆ ಮಾಡಲಾಗುತ್ತಿದೆ. ವಿದೇಶಿಗರಿಂದ ಅಕ್ರಮ ಚಟುವಟಿಕೆ ನಡೆಯಲು ಬಿಡುವುದಿಲ್ಲ, ವೀಸಾ ಮುಗಿದಿದೆ ಏನು ಮಾಡಬೇಕು ಎಂದು ಪರಿಶೀಲಿಸಲಾಗುತ್ತಿದೆ. ಸಿವಿಲ್ ಡಿಟೆನ್ಶನ್ ಸೆಂಟರ್ ಇದೆ ಅಲ್ಲಿ ಆಫ್ರಿನ್ ಪ್ರಜೆಗಳನ್ನು ಇರಿಸಲಾಗುತ್ತಿದೆ. ಅವರ ಬಗ್ಗೆಯೂ ಕಣ್ಗಾವಲು ಇವೆ, ಕೆಲವರ ವಿರುದ್ಧ ಮೊಕದ್ದಮೆ ಇವೆ, ಅವು ಮುಗಿಯದೇ ವಾಪಸ್ ಕಳಿಸಲು ಸಾಧ್ಯವಿಲ್ಲ, ಸರ್ಕಾರ ಎಚ್ಚರಿಕೆ ವಹಿಸಿದೆ. ಯಾವ ಕಾರಣಕ್ಕೂ ಕರ್ನಾಟಕವನ್ನು ಧರ್ಮದ ಅಧ್ಯಯವಾಗಲು ಬಿಡಲಾಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ