ಆರೋಪಿಗಳಿಂದ ಸರ್ವೈವಲ್ ಟಾಸ್ಕ್

ಶುಕ್ರವಾರ, 22 ಸೆಪ್ಟಂಬರ್ 2023 (16:20 IST)
ಶಿವಮೊಗ್ಗ ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ NIA ತನಿಖೆ ಮುಂದುವರಿಸಿದೆ.. ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ. ಅದರಂತೆ, ಆರೋಪಿಗಳು ಸರ್ವೈವಲ್ ಟಾಸ್ಕ್​​ ಮಾಡಿದ್ದು, ಗೂಗಲ್​ನಲ್ಲಿ ಬಾಂಬ್ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಂಡಿರುವುದು ತಿಳಿದುಬಂದಿದೆ. ವಿಚಾರಣೆ ವೇಳೆ, ಸರ್ವೈವಲ್ ಟಾಸ್ಕ್ ಮಾಡಿದ್ದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಪೊಲೀಸ್, ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲೂ ವಿಶೇಷ ತರಬೇತಿ ನೀಡಲಾಗುತ್ತದೆ. ಇದನ್ನೇ ಸರ್ವೈವಲ್ ಟಾಸ್ಕ್ ಎನ್ನುತ್ತಾರೆ. ಕಾಡುಗಳಲ್ಲಿ ತಲೆಮರೆಸಿಕೊಂಡು ಎರಡು ಮೂರು ದಿನ ಊಟ ನಿದ್ದೆ ಇಲ್ಲದೆ ಇರುವಂತದ್ದೇ ಸರ್ವೈವಲ್ ಟಾಸ್ಕ್​ ಆಗಿದ್ದು, ಇಂತಹ ಟಾಸ್ಕ್​ಗಾಗಿ ಕಾಡುಗಳಲ್ಲಿ ಕೆಲ ದಿನಗಳ ಕಾಲ ತರಬೇತಿ ನೀಡಲಾಗುತ್ತಿತ್ತು ಎಂಬ ವಿಚಾರವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಮಂಗಳೂರು ಕುಕ್ಕರ್ ಸ್ಫೋಟ ಬಳಿಕ ಆರೋಪಿ ಶಾರೀಕ್ ಇದೇ ರೀತಿ ಸರ್ವೈವಲ್ ಟಾಸ್ಕ್​ನಲ್ಲಿ ತೊಡಗುವ ಉದ್ದೇಶ ಹೊಂದಿದ್ದ. ಅರಣ್ಯ ಪ್ರದೇಶದಿಂದ ಕೆಲ ದಿನಗಳ ಬಳಿಕ ಬೇರೆ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗುವ ಪ್ಲಾನ್ ಮಾಡಿದ್ದರು. ಅಲ್ಲದೆ, ಮೊಬೈಲ್​ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದು ಕೂಡ ವಿಚಾರಣೆ ವೇಳೆ ತಿಳಿದುಬಂದಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ