ಪ್ರಯಾಣದ ಹೆಸರಿನಲ್ಲಿ ಶಂಕಿತ PFI ನಾಯಕರು ಪರಾರಿ?

ಶುಕ್ರವಾರ, 7 ಅಕ್ಟೋಬರ್ 2022 (07:17 IST)
ಬೆಂಗಳೂರು : ರಾಷ್ಟ್ರೀಯ ತನಿಖಾ ದಳ ದಾಳಿಯಿಂದ ಎಚ್ಚೆತ್ತ ನೂರಕ್ಕೂ ಹೆಚ್ಚಿನ ಶಂಕಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕರು ವಿದೇಶಿ ಪ್ರಯಾಣದ ಹೆಸರಿನಲ್ಲಿ ಪರಾರಿಯಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
 
ದಾಳಿಗೂ ಮೊದಲು ಒಂದು ವಾರ, ಹದಿನೈದು ದಿನಕ್ಕೆ ಪ್ರವಾಸ ಹೋಗಿದ್ದ ನಾಯಕರು ಮತ್ತಷ್ಟು ದಿನ ಟ್ರಿಪ್ ಮುಂದುವರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಬಂಧನಕ್ಕೆ ಒಳಗಾದ 15 ಆರೋಪಿಗಳಿಗೆ ನವೆಂಬರ್ 3ರವರೆಗೆ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ