ಶಂಕಿತ ಉಗ್ರರ ಬಂಧನ ಪ್ರಕರಣ-UAPA ಆ್ಯಕ್ಟ್ ನಡಿ ಎಫ್ ಐ ಆರ್ ದಾಖಲು

ಬುಧವಾರ, 19 ಜುಲೈ 2023 (19:05 IST)
ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ UAPA ಆ್ಯಕ್ಟ್ ನಡಿ ಎಫ್ ಐ ಆರ್ ದಾಖಲಾಗಿದೆ.Unlawful activities prevention act ನಡಿ ಪ್ರಕರಣ ದಾಖಲಾಗಿದ್ದು,ನಿಷೇಧಿತ ಸಂಘಟನೆಯ ಸದಸ್ಯರ ಜೊತೆ ಸಂಪರ್ಕ ಮಾಡಿದ್ದು,ವಿದ್ವಂಸಕ ಕೃತ್ಯ ಎಸಗಲು ಒಳಸಂಚು ರೂಪಿಸಿದ್ದಾರೆ.ದುಷ್ಕೃತ್ಯಕ್ಕೆ ಬೇಕಾಗುವ ಸ್ಪೋಟಕ ಹಾಗೂ ಶಸ್ತ್ರಾಸ್ತ್ರ ಕ್ರೂಡಿಕರಣ ಮಾಡಿದ್ದ ಆರೋಪ ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿ ಹಿನ್ನಲೆ ಆರೋಪಿಗಳ ವಿರುದ್ಧ ಆರ್ಮ್ ಆಕ್ಟ್ ಹಾಗೂ ಯು ಎ ಪಿಎ ನಡಿ ಪ್ರಕರಣ ದಾಖಲಿಸಲಾಗಿದೆ.UAPA 18&13 ಆರ್ಮ್ಸ್  ಆಕ್ಟ್ 25.3  ಐಪಿಸಿ 121a 120b,121,121 ನಡಿ ಕೇಸು ದಾಖಲಾಗಿದೆ.
 
ನಾಸೀರ್ , ಜುನೈದ್ , ಸೊಹೇಲ್ ಖಾನ್ , ಮಹಮ್ಮದ್ ಉಮರ್ , ಜಾಹೀದ್ ತಬ್ರೇಝ್ ,ಸೈಯದ್ ಮುದಾಸಿರ್ ,‌ಮೊಹಮ್ಮದ್ ಫೈಝಲ್ ವಿರುದ್ಧ ಸಿಸಿಬಿ ಎಸಿಪಿ‌ ನವೀನ್ ಕುಲಕರ್ಣಿ ಇಂದ ದೂರು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ