ರಾಶಿ‌ ರಾಶಿ ಮೀನುಗಳ ಅನುಮಾನಾಸ್ಪದ ಮಾರಣಹೋಮ‌

ಗುರುವಾರ, 6 ಅಕ್ಟೋಬರ್ 2022 (21:02 IST)
ರಾಶಿ ರಾಶಿ ಸತ್ತು ಗಬ್ಬುನಾರುತ್ತಿರುವ ಮೀನುಗಳು, ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಸ್ಥಳೀಯರು,  ರೋಗಗ್ರಸ್ಥ  ಮೀನುಗಳನ್ನು ಹಿಡಿಯಲು ಮುಗಿಬಿದ್ದಿರುವ ಜನರು ಈ ದೃಶ್ಯಗಳು ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಅತಿದೊಡ್ಡ ಕಂದವಾರ ಕೆರೆಯಲ್ಲಿ ಕಂಡುಬಂದಿದೆ. ಹೆಚ್ ಎನ್ ವ್ಯಾಲಿ ಮತ್ತು ಇತ್ತೀಚೆಗೆ ಸುರಿದ ಬಾರಿ ಮಳೆಗೆ ಕೆರೆ ತುಂಬಿ ನಳನಳಿಸುತ್ತಿದೆ . ಎರಡು ಮೂರು ಬಾರಿ ಕೋಡಿಹೋಗಿದ್ದು ,ಕೋಡಿ ಹೋದ  ಕೆರೆ ನೀರಿನಲ್ಲಿ ಮೀನುಗಳು ಕೊಚ್ಚಿಬಂದಿದ್ವು ,ಅದ್ಯಾಕೋ ಏನೋ ಕೆರೆ ನಾಲೆಯಲ್ಲಿ ರಾಶಿಗಟ್ಟಲೇ ಮೀನುಗಳ ಮಾರಣಹೋಮ ನಡೆದು ಹೋಗಿದೆ, ಮೀನುಗಳು ಕೊಳೆತು ಗಬ್ಬುನಾರುತ್ತಿದ್ದು  ಇದ್ರಿಂದ ಬರುವ ದುರ್ವಾಸನೆಗೆ  ನಗರದ ಶಿಕ್ಷಕರ ಕಾಲೋನಿ,ಭಾರತಿ ನಗರದ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
 
ಇನ್ನೂ ನಗರಸಭೆ ಅಧಿಕಾರಿಗಳೇ ಆಗಲಿ ಮೀನುಗಾರಿಕೆ ಇಲಾಖೆಯವರೇ ಆಗಲಿ ಅತ್ತ ಮುಖ ಮಾಡಿಲ್ಲ ,ಇದರಿಂದ ಅಧಿಕಾರಿಗಳ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ ಯಶಸ್ವಿನಿ ಮಾತನಾಡಿ  ನಾಲೆಯಲ್ಲಿ ನೀರು ಕಡಿಮೆ ಆದ ಕಾರಣ  ಆಮ್ಲಜನಕ‌ ಕೊರತೆಯಿಂದ ಮೀನುಗಳು ಹುಸಿರುಗಟ್ಟಿ ಸತ್ತಿವೆ ,ಮೀನುಗಳು ಹಿಡಿದು ಬೇರೆಡೆ ಮಾರಾಟ ಮಾಡುವುದಕ್ಕೆ  ಕಡಿವಾಣ ಹಾಕಲಾಗುವುದು ಜೊತೆಗೆ ಸತ್ತಿರುವ ಮೀನುಗಳ ರಾಶಿಯನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳಿಗೆ ತಿಳಿಸಿದ್ದೇವಿ ಅಂತ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ