ಕೆರೆ ಉಳಿಸಲು ಸ್ವಾಮೀಜಿ ಅಭಿಯಾನ

ಮಂಗಳವಾರ, 3 ಜುಲೈ 2018 (16:09 IST)
ಅದು ಏಷ್ಯಾ ಖಂಡದಲ್ಲೇ ಹೆಸರುವಾಸಿಯಾದ ಎರಡನೇ ಅತಿದೊಡ್ಡ ಐತಿಹಾಸಿಕ ಕೆರೆ. ತನ್ನ ಸುತ್ತ ಮುತ್ತಲ ನೂರಾರು ಗ್ರಾಮಗಳು, ನಾಲ್ಕಾರು ನಗರಗಳಿಗೆ ಕುಡಿಯು ನೀರೊದಗಿಸುತ್ತಿರು ಆ ಕೆರೆ ಲಕ್ಷಾಂತರ ರೈತರ ಜೀವನಾಡಿ ಕೂಡ ಆಗಿದೆ. ಆದ್ರೆ ಇತ್ತೀಚೆಗೆ ಕೆರೆಗೆ ಊಳು ತುಂಬಿರೋದ್ರಿಂದ ಸಾಕಷ್ಟು ನೀರು ಸಂಗ್ರಹ ಆಗ್ತಿಲ್ಲ. ಹೀಗಾಗಿ ಸರ್ಕಾರದ ನೆರವನ್ನು ಯಾಚಿಸದೇ ಆ ಐತಿಹಾಸಿಕ ಕೆರೆಯ ಪುನರುಜ್ಜೀವನಕ್ಕೆ ಸದ್ಧರ್ಮ ನ್ಯಾಯಪೀಠ ಮುಂದಾಗಿದ್ದು, ಸಿನಿಮಾ ನಟ -ನಟಿಯರು ಸೇರಿದಂತೆ ಸಾವಿರಾರು ಭಕ್ತರು ಸ್ವಯಂಸೇವಕರಾಗಿ ಮುಂದೆ ಬಂದಿದ್ದಾರೆ.

 ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಕೆರೆಗೆ ಶಾಂತಿಸಾಗರ ಎಂಬ ಹೆಸರಿದ್ದರೂ ಸೂಳೆಕೆರೆ ಎಂದೇ ಇತಿಹಾಸವಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ನಾಲ್ಕಾರು ನಗರಗಳು ಮತ್ತು ನೂರಾರು ಗ್ರಾಮಗಳಿಗೆ ನೀರು ಪೂರೈಸುತ್ತಿರುವ ಶಾಂತಿಸಾಗರ, ಲಕ್ಷಾಂತರ ರೈತರ ಜೀವನಾಡಿ ಕೂಡ. ಭಾರತದಲ್ಲೇ ಅತಿದೊಡ್ಡ ಕೆರೆಯಾದ ಸೂಳೆಕೆರೆ ಏಷ್ಯಾಖಂಡದಲ್ಲಿ ಎರಡನೇ ಸ್ಥಾನ ಪಡೆದಿದೆ. ಇತ್ತೀಚೆಗೆ ಈ ಕೆರೆ  ಹೂಳು  ತುಂಬಿರೋದ್ರಿಂದ ಸಾಕಷ್ಟು ನೀರು ಸಂಗ್ರಹವಾಗುತ್ತಿಲ್ಲ.

ಹೀಗಾಗಿ ಕೆರೆಯನ್ನು ಉಳಿಸಲು ಮುಂದಾಗಿರುವ ಚಿತ್ರದುರ್ಗ ತಾಲೂಕು ಸಿರಿಗೆರೆ ತರಳಾಬಾಳು ಗುರುಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಹಲವು ದಶಕಗಳ ಕಾಲದಿಂದ ಪರ್ಯಾಯ ನ್ಯಾಯಪೀಠವಾಗಿ ಜನರ ದುಃಖ ದುಮ್ಮಾನಗಳ ಬಗ್ಗೆ ವಿಚಾರಣೆ ನಡೆಸಿ ನ್ಯಾಯದ ತೀರ್ಪು ಕೊಡುತ್ತಿರುವ ತಮ್ಮ ಸದ್ಧರ್ಮ ನ್ಯಾಯ ಪೀಠದಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಶ್ರೀಮಠದ ಸಾವಿರಾರು ಭಕ್ತರ ನೆರವಿನೊಂದಿಗೆ, ಸರ್ಕಾರದಿಂದ ಯಾವುದೇ ನೆರವು ಯಾಚಿಸದೇ ಸೂಳೆಕೆರೆಗೆ ಪುನಋಜ್ಜೀವನ ಕೊಡಲು ಮುಂದಾಗಿದ್ದಾರೆ. ಶ್ರೀಗಳ ನಿರ್ಣಯಕ್ಕೆ ತಲೆಬಾಗಿರೋ ಚಲನಚಿತ್ರ ನಟ- ನಟಿಯರು ಕೂಡ ಕೆರೆಯ ಉಳಿವಿಗಾಗಿ ಕೈಜೋಡಿಸಿದ್ದಾರೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ