ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಸಿಹಿ ತಿನಿಸು, ಐಸ್ ಕ್ರೀಂ ದುಬಾರಿ

Krishnaveni K

ಶುಕ್ರವಾರ, 28 ಜೂನ್ 2024 (09:00 IST)
Photo Credit: X
ಬೆಂಗಳೂರು: ಇತ್ತೀಚೆಗೆ ಕೆಎಂಎಫ್ ನಂದಿನಿ ಹಾಲಿನ ಮೇಲೆ 2 ರೂ. ದರ ಹೆಚ್ಚಳ ಮಾಡಿತ್ತು. ಅದರ ಪರಿಣಾಮ ಈಗ ಹಾಲು ಬಳಸಿ ಮಾಡುವ ಸಿಹಿ ತಿನಿಸುಗಳಿಗೂ ತಟ್ಟಿದೆ.

ನಂದಿನಿ ಹಾಲಿನ ದರ ಏರಿಕೆಯಾದ ಬೆನ್ನಲ್ಲೇ ಹಾಲು ಬಳಸಿ ಮಾಡುವ ಧಾರವಾಡ ಪೇಡ, ಮಿಲ್ಕ್ ಶೇಕ್, ಐಸ್ ಕ್ರೀಂ ಬೆಲೆಯೂ ಭಾರೀ ಏರಿಕೆಯಾಗಲಿದೆ. ಐಸ್ ಕ್ರೀಂ ಬೆಲೆ ಒಂದು ಲೀಟರ್ ಗೆ 10 ರಿಂದ 15 ರೂ ಏರಿಕೆಯಾಗಲಿದೆ. ಮಿಲ್ಕ್ ಶೇಕ್ ಗೂ 10 ರಿಂದ 15 ರೂ. ಬೆಲೆ ಏರಿಕೆಯಾಗಲಿದೆ.

ಈಗಾಗಲೇ ಕಾಫಿ, ಟೀ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಹೋಟೆಲ್ ಮಾಲಿಕರ ಸಂಘ ತಿಳಿಸಿದೆ. ಆದರೆ ಮಿಲ್ಕ್ ಶೇಕ್, ಹಾಲು ಬಳಸಿ ಮಾಡುವಂತಹ ಜ್ಯೂಸ್ ಮತ್ತಿತರ ವಸ್ತುಗಳ ದರ ಏರಿಕೆ ಮಾಡುವುದು ಅನಿವಾರ್ಯವಾಗಲಿದೆ ಎಂದಿದೆ. ಹೀಗಾಗಿ ಇನ್ನು ಮಿಲ್ಕ್ ಶೇಕ್ ಕೊಂಚ ದುಬಾರಿಯಾಗಬಹುದು.

ಬರ್ಫಿ, ದೂದ್ ಪೇಡ, ಧಾರವಾಡ ಪೇಡ, ಕೇಕ್ ಸೇರಿದಂತೆ ಯಾವುದೇ ಸಿಹಿ ತಿನಿಸು ಮಾಡುವುದಿದ್ದರೂ ಹಾಲು ಬೇಕೇ ಬೇಕು. ಹೀಗಾಗಿ ಇನ್ನು ಮುಂದೆ ಸಿಹಿ ತಿನಿಸಿನ ಬೆಲೆಯಲ್ಲೂ 5-10 ರೂ.ಗಳಷ್ಟು ಏರಿಕೆ ಮಾಡುವುದು ಅನಿವಾರ್ಯವಾಗಲಿದೆ. ರೈತರ ಹೆಸರಿನಲ್ಲಿ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಆದರೆ ಇದರಿಂದ ಬೇರೆ ಬೇರೆ ರೂಪದಲ್ಲಿ ಮಧ್ಯಮ ವರ್ಗದ ಜನ ಬರೆ ಹಾಕಿಸಿಕೊಳ್ಳುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ