ಈ ಹಿಂದೆ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಯಾರೂ ರೆಡಿ ಇರಲಿಲ್ಲ. ಆಗ ನಾನು ಅವರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಆದರೆ ನನ್ನ ಪರವಾಗಿ ಪ್ರಚಾರ ಮಾಡಲು ಯಾರೂ ಬರಲಿಲ್ಲ. ನಾನು ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ಲಿಂಗಾಯತ, ಕುರುಬ ನಾಯಕರು ಯಾರೂ ಬರಲಿಲ್ಲ.
ಒಂದು ವೇಳೆ ಆಗ ಎಲ್ಲರೂ ನನ್ನ ಪರ ಪ್ರಚಾರಕ್ಕೆ ಬಂದಿದ್ದರೆ ನಾನು ಗೆಲ್ಲುತ್ತಿದ್ದೆ. ಈಗಲೂ ಆ ಬಗ್ಗೆ ನನಗೆ ಬೇಸರವಿದೆ ಎಂದು ಖಾದ್ರಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈಗ ಶಿಗ್ಗಾಂವಿಯಲ್ಲಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯಾಸಿರ್ ಅಹ್ಮದ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಿಗೆ ಟಿಕೆಟ್ ನೀಡುವುದು ಪದ್ಧತಿ. ಆದರೆ ಈಗ ಯಾಸಿರ್ ಗೆ ಟಿಕೆಟ್ ನೀಡಿದ್ದಾರೆ. ಆದರೆ ಆತ ಒಬ್ಬ ರೌಡಿ ಶೀಟರ್, ಆತನ ಮೇಲೆ 17 ಕೇಸ್ ಗಳಿವೆ. ಇಂತಹವನಿಗೆ ಜನ ವೋಟ್ ಹಾಕ್ತಾರಾ? ನನಗೆ ಟಿಕೆಟ್ ಕೈ ಸಿಗದಂತೆ ಕೆಲವರು ಷಡ್ಯಂತ್ರ ಮಾಡಿದರು. ಪಕ್ಷೇತರನಾಗಿ ನಿಲ್ಲುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.