ಕರ್ನಾಟಕದಲ್ಲಿ ವ್ಯಾಪಾರ, ವಹಿವಾಟು ಮಾಡುತ್ತೀರಿ ಎಂದಾದರೆ ಕನ್ನಡ ನಾಮಫಲಕ ಹಾಕಲು ಏನು ಸಮಸ್ಯೆ ಎಂದು ಕೋರ್ಟ್ ಪ್ರಶ್ನೆ ಮಾಢಿದೆ. ಕರ್ನಾಟಕದಲ್ಲಿದ್ದ ಮೇಲೆ ನಾಮಫಲಕಗಳನ್ನು ಕನ್ನಡದಲ್ಲಿಯೇ ಹಾಕಬೇಕು ಎಂದು ಪ್ರಶ್ನೆ ಮಾಡಿ ಕೋರ್ಟ್ ಮೆಟ್ಟಿಲೇರಿದ ಖಾಸಗಿ ಕಂಪನಿಗಳಿಗೆ ಖಡಕ್ ಆಗಿ ತಾಕೀತು ಮಾಡಿದೆ.
ವಾಣಿಜ್ಯ, ವ್ಯವಹಾರ ನಡೆಸುವ ಅಂಗಡಿಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಸಮರ್ಥಿಸಿ ಮಾರ್ಚ್ 18 ರಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ರೀಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯಾ ಬಿರ್ಲಾ ಫ್ಯಾಷನ್ ಆಂಡ್ ರೀಟೇಲ್ ಲಿಮಿಟೆಡ್ ಸೇರಿದಂತೆ 24 ಖಾಸಗಿ ಕಂಪನಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.